Header Ads Widget

ಬೆಳ್ತಂಗಡಿ : ಲವ್, ಸೆಕ್ಸ್ ದೋಖಾ; ಯುವತಿ ಆತ್ಮಹತ್ಯೆ!


ಪ್ರೀತಿ ಅನ್ನೋದೇ ಈಗೆ ಕಷ್ಟ ಪಟ್ಟು ಬೆಳೆಸಿದ ಅಪ್ಪ ಅಮ್ಮನ ನೆನಪಿರಲ್ಲ .ಈ ಹದಿಹರೆಯದ ವಯಸ್ಸು ಅನ್ನೋದು ತುಂಬಾ ಡೇಂಜರ್ ಒಂದು ಹೆಜ್ಜೆ ತಪ್ಪಿದರೆ ಸಾಕು ಜೀವನನೇ ಎಕ್ಕುಟ್ಟು ಹೋಗುತ್ತೆ ಪ್ರೀಯಕರಣ ಪ್ರೀತಿಗೆ ಮರುಳಾಗಿ ಲವ್, ಸೆಕ್ಸ್, ದೋಖಾಗೆ ಅಪ್ರಾಪ್ತ ಯುವತಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಸದ್ಯ ಆರೋಪಿ ಯುವಕ ಪರಾರಿಯಾಗಿದ್ದಾನೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಸಂಬಂಧಿ ಪ್ರವೀಣ್ ಎಂಬಾತನಿಂದ ಮದುವೆ ನೆಪದಲ್ಲಿ ವಂಚನೆಗೊಳಗಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.ಬಾಲಕಿ ನವೆಂಬರ್ 20 ರಂದು ಇಲಿ ವಿಷ ಸೇವಿಸಿದ್ದು, ಗುರುವಾರ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ವರದಿಗಳ ಪ್ರಕಾರ, ಹುಡುಗಿ ಮತ್ತು ಪ್ರವೀಣ್ ಸಂಬಂಧದಲ್ಲಿದ್ದರು, ಆದರೆ ಅವನು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಆಕೆಗೆ ದ್ರೋಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿಯ ಪೋಷಕರು ಪ್ರವೀಣ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರವೀಣ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಚಾರ್ಮಾಡಿ ನಿವಾಸಿ ಪ್ರವೀಣ್ ಎಂಬಾತ ಮದುವೆ ನೆಪದಲ್ಲಿ ಬಾಲಕಿಯೊಂದಿಗೆ ಲೈಗಿಕ ಸಂಬಂಧ ಹೊಂದಿದ್ದನಾದರೂ ಮದುವೆ ಆಗುತ್ತೇನೆಂದು ಹೇಳಿ ಮೋಸ ಮಡಿದ ಹಿನ್ನೆಲೆ ಯುವತಿ ಆತ್ಮಹತ್ಯೆ ಮಾಡಿದ್ದಾಳೆಂದು ಆಕೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಮೃತರು ದ್ವಿತೀಯ ಪಿಯು ವಿದ್ಯಾರ್ಥಿ. ನವೆಂಬರ್ 20 ರಂದು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಗೆ ಆಘಾತವನ್ನುಂಟು ಮಾಡಿತು. ಆಕೆಯ ಈ ಕೃತ್ಯದ ಹಿಂದಿನ ಸತ್ಯ ಆಕೆಯ ನಿಧನದ ನಂತರ ಬೆಳಕಿಗೆ ಬಂದಿದೆ. ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ.ಯುವತಿಗೆ ಪ್ರವೀಣ ಗರ್ಭ ನಿರೋಧಕ ಮಾತ್ರೆಯನ್ನು ನೀಡಿದ್ದಾನೆ. ಯುವತಿ ಮನೆಯವರು ವಯಸ್ಸು ಪೂರ್ತಿಯಾದಾಗ ಮದುವೆ ಮಾಡಿ ಕೊಡೋದಾಗಿ ಹೇಳಿದ್ದಾರೆ. ಪ್ರೀತಿ ಸಾಗುತ್ತಿದ್ದಾಗ ಪ್ರವೀಣ್ಗೆ ಯಾಕೋ ಈಕೆಗೆ ಜೊತೆಗಿನ ಸಾಂಗತ್ಯ ಬೋರ್ ಎನಿಸಿದೆ. ದೂರ ಆಗೋಣ ಬ್ರೇಕಪ್ ಅಂತಾ ಹೇಳಿದ್ದಾನೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರವೀಣ ಕೈ ಕೊಡುತ್ತಿರೋದನ್ನು ಸಹಿಸಲಾಗದೆ ಯುವತಿ ಇಲಿ ಪಾಶಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಂಗಳೂರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯುವತಿ ನವೆಂಬರ್ 26 ರ ಮಂಗಳವಾರ ಸಾವನ್ನಪ್ಪಿದ್ದಾಳೆ. ಪ್ರವೀಣ್ ಯುವತಿಯ ತಾಯಿ ಬಳಿ ಈ ಹಿಂದೆಯೇ ದೇವರ ಆಣೆ ಹಾಕಿ ಆಕೆಯನ್ನೇ ಮದುವೆಯಾಗೋದಾಗಿ ಹೇಳಿದ್ದಾನೆ. ಪ್ರವೀಣನ ಮಾತನ್ನು ನಂಬಿ ಯುವತಿಯ ತಾಯಿಯೂ ಪ್ರವೀಣನ ಜೊತೆಗೆ ತಿರುಗಾಡೋಕೆ ಅನುಮತಿ ನೀಡಿದ್ದಾರೆ‌. ನವೆಂಬರ್ ಇಪ್ಪತ್ತರ ಮಧ್ಯರಾತ್ರಿ ವಾಂತಿ ಮಾಡಿಕೊಂಡಾಗಲೂ ಯುವತಿ ತಾಯಿಯ ಜೊತೆ ಪ್ರವೀಣನಿಂದ ಆದ ಮೋಸದ ಬಗ್ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಪ್ರವೀಣ್ ತನ್ನನ್ನು ಬಳಸಿಕೊಂಡೊರೋದಾಗಿ ಹೇಳಿದ್ದಾರೆ.ಒಟ್ಟಿನಲ್ಲಿ ಈ ಹದಿಹರೆಯದ ವಯಸ್ಸಿನ ಮೋಹಕ್ಕೆ ಕಷ್ಟ ಪಟ್ಟು ಬೆಳೆಸಿದ್ದ ಮಗಳು ಬಲಿಯಾಗಿರುವುದು ಪೋಷಕರಿಗೆ ದಿಗಿಲು ಬಡಿದಂತಾಗಿದೆ.