ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಪು ಸ್ಥಳೀಯ ಸಂಸ್ಥೆಯ ಪಟಲಾಂ ಮತ್ತು ಷಟ್ಕ ನಾಯಕರ ತರಬೇತಿ ಶಿಬಿರವು ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಿನಾಂಕ 15 ಮತ್ತು 16ರಂದು ಜರುಗಿತ್ತು.
300ಕ್ಕೂ ಮಿಕ್ಕಿ ಸ್ಕೌಟ್ಸ್, ಗೈಡ್, ಕಬ್ ,ಬುಲ್ ಬುಲ್ ವಿದ್ಯಾರ್ಥಿಗಳು 50 ಮಂದಿ ಶಿಕ್ಷಕರು ಭಾಗವಹಿಸಿದ್ದರು.
ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಭಾ ಅಧ್ಯಕ್ಷತೆಯನ್ನು ವಹಿಸಿ, ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ಹಾಗು ಬನ್ನಿಸ್ ಎಂಬ ಐದು ವಿಭಾಗಗಳು ಇವೆ.ಇದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಜೀವನದಲ್ಲಿ ಮುಂದೆ ಬರಲು ಹಲವಾರು ಅವಕಾಶಗಳು ದೊರಕುತ್ತವೆ. ಸಿಕ್ಕಿದ ಅವಕಾಶದ ಸದ್ಬಳಕೆ ಮಾಡಬೇಕು. ಭಾರತ್ ಸ್ಕೌಟ್ಸ್ ಗೈಡ್ಸ್ ನ ಸದಸ್ಯೆ ಶರ್ಮಿನ್ ಭಾನು ಇವರು ಯುರೋಪ್ ರಾಷ್ಟ್ರಕ್ಕೆ ತೆರಳಿರುವುದು ನಮಗೆ ಹೆಮ್ಮೆಯ ವಿಷಯ ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಶ್ರೀ ಮಟ್ಟಾರ ರತ್ನಾಕರ ಹೆಗ್ಡೆಯವರು ಶಿಬಿರವನ್ನು ಉದ್ಘಾಟಿಸಿ ರಾಬರ್ಟ್ ಬಾಡೆನ್ ಪೊವೆಲ್ ರವರು 1907ರಲ್ಲಿ ಸ್ಕೌಟ್ಸ್ ನ್ನು ಪ್ರಾರಂಭಿಸಿದರು ಎಂದು ಸ್ಕೌಟ್ಸ್ ಬಗೆಗಿನ ಇತಿಹಾಸವನ್ನು ಸಭೆಗೆ ತಿಳಿಸಿದರು.
ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಆಲ್ಬನ್ ರೊಡ್ರಿಗಸ್ ರವರು ನಾನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಓರ್ವ ವಿದ್ಯಾರ್ಥಿ ನನಗೆ ತನ್ನ ಆಸನವನ್ನು ನೀಡಿದ ಹಾಗೆಯೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ನನ್ನ ವಸ್ತುಗಳನ್ನು ಎತ್ತಿ ಕೊಟ್ಟ ಸಮಯದಲ್ಲಿ ನಾನು ಕೇಳಿದೆ, ನೀನು ಸ್ಕೌಟ್ಸ್ ಅಥವಾ ಗೈಡ್ಸ್ ಆಗಿರಬೇಕು ಎಂದಾಗ ಹೌದು ಎಂಬ ಉತ್ತರ ಬಂತು. ಹೀಗೆ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಹಾಗೂ ಹಿರಿಯರಿಗೆ ಗೌರವವನ್ನು ನೀಡಲು ಕಲಿಯುತ್ತಾರೆ. ಜೀವನದಲ್ಲಿ ಬರುವ ಕಷ್ಟವನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ತಿಳಿದುಕೊಳ್ಳಲು ಸಾಧ್ಯ ಎಂದರು.
ಪ್ರೊಫೆಸರ್ ವೈ. ಭಾಸ್ಕರ್ ಶೆಟ್ಟಿ ಆಡಳಿತ ಅಧಿಕಾರಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತಾ ರಾಜೇಶ್, ಪ್ರಾಂಶುಪಾಲರಾದ ಡಾ.ಸಹನಾ ಹೆಗ್ಡೆ, ಉಪಪ್ರಾಂಶುಪಾಲೆ ನಿಶಾ ಶೆಟ್ಟಿ, ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಡಾ. ಗೀತ ಶಶಿಧರ್, ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀಮತಿ ಸುಮನ್ ಶೇಖರ್, ಶಿಬಿರದ ನಾಯಕಿ ನಿಮಿತ ಶೆಟ್ಟಿ,, ಶಿಕ್ಷಕ ಶಿಕ್ಷಕೇತರ ವ್ರಂದ, ವಿದ್ಯಾರ್ಥಿವ್ರಂದ ಮೊದಲಾದವರು ಉಪಸ್ಥಿತರಿದ್ದರು.
ಪಟಾಲಂ ಎಂದರೇನು? ನಾಯಕರನ್ನು ಗುರುತಿಸುವಿಕೆ, ನಾಯಕರ ಕರ್ತವ್ಯ, ನಾಯಕತ್ವ ಗುಣ ಬೆಳೆಸುವಿಕೆ, ಪಟಾಲಂ ಚಟುವಟಿಕೆ, ಪಟಾಲಂ ಮೂಲೆ, ಸ್ಕೌಟಿಂಗ್ ಗುರಿ, ಮೂಲ ತತ್ವ, ಉದ್ದೇಶ, ಪ್ರತಿಜ್ಞೆ, ನಿಯಮ, ಧ್ಯೇಯ, ಸಂಕೇತ, ವಂದನೆ, ಎಡಗೈ ಹಸ್ತಲಾಘವ, ಧ್ವಜಗಳು, ದಳ ಸಭೆ, ಪ್ರಾರ್ಥನೆ, ಧ್ವಜಗೀತೆ, ರಾಷ್ಟ್ರಗೀತೆ ಮೊದಲಾದ ಕುರಿತು ಸವಿಸ್ತಾರವಾಗಿ ಮಾಹಿತಿಗಳನ್ನು ಶಿಬಿರದಲ್ಲಿ ನೀಡಲಾಯಿತು.
ಕಾಪು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮರಿಯ ಅನಿತ ಮೆಂಡೋನ್ಸ ರವರು ಸ್ವಾಗತಿಸಿದರು. ಶ್ರೀಯುತ ಉಮೇಶ್ ಕಾಂಚನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸ್ಕೌಟ್ ಮಾಸ್ಟರ್ ಶ್ರೀಮತಿ ಅಮಿತಾ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿ, ಗೈಡ್ ಕ್ಯಾಪ್ಟನ್ ಶ್ರೀಮತಿ ರೀಖಾ ಫೆರ್ನಾಂಡಿಸ್ ರವರು ಧನ್ಯವಾದಗಳನ್ನು ನೀಡಿದರು.