Header Ads Widget

ಚಿನ್ನ ವಜ್ರಾಭರಣ ಕಳ್ಳತನ ಪ್ರಕರಣದ ಆರೋಪಿಯ ಬಂಧನ


ದಿನಾಂಕ:17/11/2024 ರಂದು ಉಡುಪಿ ನಗರ  ಪೊಲೀಸ್ ಠಾಣೆಯಲ್ಲಿ  ಪ್ರಸಾದ ಎಸ್‌. ಎಸ್‌ ಎಂಬವರು ದೂರು ದಾಖಲಿಸಿದ್ದು, ಅವರ ಮನೆಯಲ್ಲಿ ಹೋಂ ನರ್ಸ ಆಗಿ ಕೆಲಸ ಮಾಡಿಕೊಂಡಿದ್ದ, ಸಿದ್ದಪ್ಪ ಕೆ. ಕೊಡ್ಲಿ ಎಂಬಾತನು ದಿನಾಂಕ: 17/11/24 ರಂದು ಬೆ: 09-15 ಗಂಟೆಯಿಂದ ಮ: 1-15 ಘಂಟೆಯ ಮದ್ಯಾವಧಿಯಲ್ಲಿ ಅವರ ಮನೆಯ ಹಾಲ್‌ ನ ಗಾಜಿನ ಬೀರುವಿನಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇರಿಸಿದ್ದ ಗ್ರಾಡ್ರೇಜ್ ನ ಲಾಕರ್‌ ನಲ್ಲಿ ಇರಿಸಿದ್ದ ಸುಮಾರು 427 ಗ್ರಾಂ ತೂಕದ  ರೂ: 31,17,100/- ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ :  194/2024 ಕಲಂ: 306 BNS ನಂತೆ  ಪ್ರಕರಣ ದಾಖಲಾಗಿರುತ್ತದೆ. 


ಸದ್ರಿ ಪ್ರಕರಣದ ತನಿಖೆಯನ್ನು ಪಿ.ಐ, ರಾಮಚಂದ್ರ ನಾಯಕ್ ,  ಉಡುಪಿ ನಗರ ಠಾಣೆರವರು ಕೈ ಗೊಂಡು ಆರೋಪಿ ಮತ್ತು ಸ್ವತ್ತು ತನಿಖೆಯನ್ನು ಪತ್ತೆಯ ಬಗ್ಗೆ  ಉಡುಪಿ ನಗರ ಪೊಲೀಸ್‌ ಠಾಣಾ ಪಿಎಸ್‌ಐ  ಈರಣ್ಣ ಶಿರಗುಂಪಿ,  ಪುನೀತ್, ಉಡುಪಿ ಸೆನ್‌ ಪೊಲೀಸ್‌ ಠಾಣೆ ಪಿ. ಎಸ್. ಐ ಪವನ್‌ ಕುಮಾರ್‌, ಉಡುಪಿ ನಗರ ಠಾಣೆಯ  ಅಬ್ದುಲ್‌ ಬಶೀರ್‌, ಸಂತೋಷ, ಚೇತನ್‌ ಮತ್ತು ಸೆನ್ ಠಾಣೆಯ ಪ್ರವೀಣ ಕುಮಾರ್, 


ಪ್ರವೀಣ ರವರ ತಂಡ ದಿನಾಂಕ : 19/11/2024 ರಂದು ಆರೋಪಿ ಸಿದ್ದಪ್ಪ ಕೆ. ಕೊಡ್ಲಿ(23), ಕುಷ್ಟಗಿ ತಾಲ್ಲೂಕು, ಕೊಪ್ಪಳ ಇತನನ್ನು  ದಸ್ತಗಿರಿಗೊಳಿಸಿ, ಕಳವು ಮಾಡಿ ಅಡಗಿಸಿಟ್ಟಿದ್ದ ಸ್ಥಳದಿಂದ ಅಂದಾಜು ರೂ: 30,00,000/- ಮೌಲ್ಯದ 374.45 ಗ್ರಾಮ್ಸ್‌ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣ ಗಳನ್ನು ಸ್ವಾಧೀನಪಡಿಸಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.