Header Ads Widget

ಕೆಲವೊಂದು ಸಾವುಗಳು ಎಷ್ಟು ಕ್ರೂರಿ ನೋಡಿ.. ಜೀವನ ಅಂತ್ಯವಾಗುವುದಕ್ಕೆ ನೆವನ ಅಷ್ಟೇ..


ಯಾರು ಎಣಿಸದ ರೀತಿಯಲ್ಲಿ ದುರಂತ ಅಂತ್ಯ ಒಂದು ಕಂಡಿದೆ.. ಪವಿತ್ರ ದೇವಾಲಯದ ಮುಂದೆ ದಾಂಪತ್ಯ ಜೀವನದಲ್ಲಿ ಒಬ್ಬರನ್ನೊಬ್ಬರು ಕೈಹಿಡಿದು ಸುಖ ದುಃಖದಲ್ಲಿ ಕೈ ಬಿಡುವುದಿಲ್ಲ ಎಂಬ ಭಾಷೆಯನ್ನು ಕೊಟ್ಟಿದ್ದರು.. ಆ ಭಾಷೆ ಸುಖ ದುಃಖದಲ್ಲಿ ಮಾತ್ರವಲ್ಲ ಮರಣದಲ್ಲು ಜೊತೆಯಾಗಿದೆ.. 

 ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಬಲಿಷ್ಠ ಕಂಬ ಒಂದು ಕುಸಿದಿದೆ... ವಾರ್ಷಿಕ ಮಹೋತ್ಸವಕ್ಕೆ ಒಂದೆರಡು ದಿನಗಳಿರುವಾಗಲೇ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಲೊರೆನ್ಸ್ ಡೆಸಾ ರವರ ನಿಧಾನವಾಗಿದೆ.. ನಿನ್ನೆಯಷ್ಟೇ ಅವರ ಪತ್ನಿ ಶಿಕ್ಷಕಿ ಜೂಲಿಯನ ಡೆಸಾ ನಿಧನರಾಗಿದ್ದರು.. ಅಸೌಖ್ಯ ಎಂಬುದು ಕೊನೆ ಕ್ಷಣದವರೆಗೂ ಈ ದಂಪತಿಗಳಿಗೆ ಗೊತ್ತಾಗಲೇ ಇಲ್ಲ.. 

 ಐದು ಬಾರಿ ಗ್ರಾಮ ಪಂಚಾಯತ್ ಸದಸ್ಯ, 2-3 ಬಾರಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ, ಇಂಗ್ಲಿಷ್ ಮಾಧ್ಯಮ ಶಾಲೆ, ಧರ್ಮಗುರುಗಳ ಮನೆ, ಚರ್ಚ್, ಸಭಾಭವನ ಎಲ್ಲವೂ ಇವರದೇ ಆಳ್ವಿಕೆಯಲ್ಲಿರುವಾಗಲೇ ಆದದ್ದು.. ನಾಯಕತ್ವಕ್ಕೆ ಹೇಳಿ ಮಾಡಿದ ವ್ಯಕ್ತಿ.. ಯಾವುದೇ ಜವಾಬ್ದಾರಿಯನ್ನು ಕೊಟ್ಟರು ಅತ್ಯಂತ ಯಶಸ್ವಿ ಮಟ್ಟದಲ್ಲಿ ನಿಭಾಯಿಸಬಲ್ಲ ಸಾರಥಿ.. ಫ್ರೆಂಡ್ಸ್ ಸರ್ಕಲ್, ಲಯನ್ಸ್ ಕ್ಲಬ್, ಕಥೊಲಿಕ್ ಸಭಾ ಜೊತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷನ ಜೊತೆಗೆ ಬೇರೆ ಬೇರೆ ಹುದ್ದೆಯನ್ನು ಸ್ವೀಕರಿಸಿ ಸಂಘಟನೆಯನ್ನು ಬಲಿಷ್ಠ ಮಾಡಿದ ವ್ಯಕ್ತಿ.. 

 ಕ್ರೀಡೆ, ಕೃಷಿ ಎಲ್ಲದರಲ್ಲೂ ಮುಂದು.. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಚಾಂಪಿಯನ್ ಇವರು.. ಇವರು ಮಾಡುವ ಕೃಷಿ ಎಲ್ಲರಿಗೂ ಪ್ರೇರಣೆ.. ಅಲ್ಲಿ ಇಲ್ಲಿ ಓಡಾಡುವ ಇವರು ಕುಳಿತುಕೊಂಡದ್ದು ಬಹಳಷ್ಟು ಕಡಿಮೆ.. ಮಳೆ ಇರಲಿ, ಬಿಸಿಲಿರಲಿ ಲಾರೆನ್ಸ್ ಡೇಸ ಇದ್ದರೆ ಎಲ್ಲವೂ ಸಕ್ಸಸ್.. ಉದ್ಯಾವರ ಪಂಚಾಯತ್ ನ ಬಹಳಷ್ಟು ಸದಸ್ಯರು ತಮ್ಮದೇ ವಾರ್ಡ್ನಲ್ಲಿ ನಿಂತು ಗೆದ್ದವರು.. ಆದರೆ ಲಾರೆನ್ಸ್ ಡೆಸಾ ಉದ್ಯಾವರದ ಯಾವುದೇ ವಾರ್ಡ್ನಲ್ಲಿ ನಿಂತರೂ ಗೆದ್ದು ಬಂದು ತೋರಿಸಿದ ಚಾಣಾಕ್ಷ ರಾಜಕಾರಣಿ..

 ನವೀಕೃತ ಉದ್ಯಾವರ ಚರ್ಚ್ ಆರಂಭವಾಗಿ 10ನೇ ವರ್ಷಕ್ಕೆ ಸಮೀಪಿಸುತ್ತಿದೆ.. ಈ ಹಿನ್ನಲೆಯಲ್ಲಿ ಒಂದು ತಿಂಗಳಿನಿಂದ ಚರ್ಚ್ ಮತ್ತು ಗುರುಗಳ ಮನೆ ಪೈಂಟಿಂಗ್ ನಡೆಯುತ್ತಿತ್ತು.. ಎಲ್ಲದಕ್ಕೂ ಲಾರೆನ್ಸ್ ಡೇಸಾನೆ ನೇತೃತ್ವ.. ಫೈಟಿಂಗ್ ಮುಗಿತಾ ಬಂತು.. ವಾರ್ಷಿಕ ಮಹೋತ್ಸವಕ್ಕೆ ಉದ್ಯಾವರ ಚರ್ಚ್ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.. ಆದರೆ ಲಾರೆನ್ಸ್ ಡೆಸಾ ಪತ್ನಿ ಸಮೇತ ಆಸ್ಪತ್ರೆಯ ಶವಗಾರದಲ್ಲಿದ್ದಾರೆ.. 

 ಮಾತುಗಳಿಲ್ಲ.. ಎಲ್ಲವೂ ಮೌನ.. ಲಾರೆನ್ಸ್ ಡೇಸ ಇಲ್ಲದ ನಮ್ಮ ಚರ್ಚ್ ನಿರೀಕ್ಷಿಸಲು ಅಸಾಧ್ಯ.. ಜನ್ಮ ಪಡೆದ ಪ್ರತಿಯೊಬ್ಬರಿಗೂ ಮರಣ ಎಂಬುದು ಖಂಡಿತ ಇದೆ.. ಹಲವು ಕಠೋರ ಮತ್ತು ಕ್ರೂರ ಮರಣವನ್ನು ಕಂಡಿದ್ದೇವೆ.. ಆದರೆ ಇದೀಗ ನಮ್ಮ ಜೊತೆಗಿದ್ದ, ನಮಗೆ ಮಾರ್ಗದರ್ಶನ ಮಾಡುತ್ತಿದ್ದ, ಎಲ್ಲರನ್ನು ಒಟ್ಟುಗೂಡಿಸುತ್ತಿದ್ದ ಹಸನ್ಮುಖಿ ಲಾರೆನ್ಸ್ ಡೇಸ ಮಾತ್ರ ಪತ್ನಿ ಸಮೇತ ದೇವರ ಮನೆ ಸೇರಿಕೊಂಡಿದ್ದಾರೆ..

 ಯಾವುದೇ ಯೋಜನೆಗೆ ನೇತೃತ್ವ, ಕಾರ್ಯಕ್ರಮ, ಕೆಲಸಗಳು, ರಾಜಕೀಯ.. ಎಲ್ಲದರಲ್ಲೂ ಸೋಲರಿಯದ ಲಾರೆನ್ಸ್ ಡೇಸ ಇಂದು ಮಾತ್ರ ಸಾವಿಗೆ ಶರಣಾಗತಿಯಾಗಿದ್ದಾರೆ..

ಮರೆಯಲಾರೆವು ಡೇಸ ಅಂಕಲ್, ನಿಮ್ಮ ಜೊತೆ ಮಾಡಿದ ಕೆಲಸಗಳು, ನಡೆಸಿದ ಚರ್ಚೆಗಳು, ಕಾರ್ಯಕ್ರಮಗಳು ಇದೆಲ್ಲವೂ ಇನ್ನು ನೆನಪು ಮಾತ್ರ.. 

ಮತ್ತೊಂದು ಜನ್ಮವಿದ್ದರೆ ಮತ್ತೊಮ್ಮೆ ಹುಟ್ಟಿ ಬನ್ನಿ "ಆದರ್ಶ ದಂಪತಿ"ಗಳೇ..

~ಸ್ಟೀವನ್ ಕುಲಾಸೊ ಉದ್ಯಾವರ*