ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರನಾಯಕ್ ಮತ್ತು ಪ್ರೊಬೆಶನರಿ ಡಿ.ವೈ.ಎಸ್.ಪಿ. ಗೀತಾ ಪಾಟೀಲ್ ರವರ ನೇತೃತ್ವದಲ್ಲಿ ಉಪನಿರೀಕ್ಷಕರಾದ ಪವನ್ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್, ವೆಂಕಟೇಶ್, ನಿಲೇಶ್, ರಾಘವೇಂದ್ರ, ಪ್ರಶಾಂತ್ ಮತ್ತು ಚರಣ್‌ರಾಜ್ ಇವರನ್ನು ಒಳಗೊಂಡ ತಂಡ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 74/2024 ಕಲಂ 8(c), 20 (b) (ii), (B) NDPS Act 1985 ಪ್ರಕರಣದಲ್ಲಿ ಉಳಿದ ಆರೋಪಿಗಳ ತಲಾಶೆಯಲ್ಲಿರುತ್ತಾ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿತರಾದ 1) ಮಹಮ್ಮದ್ ಸಪಾಝ್ (29), ನರಿಂಗಾಣ ಗ್ರಾಮ, ಬಂಟ್ವಾಳ ತಾಲೂಕು
2) ಚರಣ್ ಯು ಭಂಡಾರಿ (19), ಸಂತೆಕಟ್ಟೆ, ಪುತ್ತೂರು ಗ್ರಾಮ, ಉಡುಪಿ ಇವರುಗಳನ್ನು ದಸ್ತಗಿರಿಗೊಳಿಸಿ ಆವರಿಂದ 1) ಗಾಂಜಾ- 740 ಗ್ರಾಂ ತೂಕ, ಮೌಲ್ಯ ರೂ, 53,300/-,
2) KA51AD3933ನೇ HONDA ಕಂಪೆನಿಯ Activa ಸ್ಕೂಟರ್ -1 ಅಂದಾಜು ಮೌಲ್ಯ ರೂ, 25,000/-
3) ನಗದು ರೂ, 2170/-
4) 2 ಮೊಬೈಲ್ ಪೋನ್. ಅಂದಾಜು ಮೌಲ್ಯ ರೂ. 18,000/-,
5) ಚೂರಿ-1, ರೂ, 300/-.
ಸ್ವಾಧೀನ ಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ, 98,770/-ರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.