ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಿಸುವ ನಾವಿಕ ಎಲ್ಲ ಬಗೆಯ ಜನರನ್ನೂ ಒಂದು ಕುಟುಂಬದವರ0ತೆ ಕರೆದೊಯ್ಯುವ ಜಾಣ್ಮೆ ಹೊಂದಿರಬೇಕು. ಅದೇ ರೀತಿ ಪೂರ್ಣಪ್ರಜ್ಞ(ಕಾಲೇಜು) ಎಂಬ ಬೃಹತ್ ನೌಕೆಯನ್ನು ನಿರ್ಮಿಸಿದ ಬ್ರಹ್ಮೆಕ್ಯ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಸಮರ್ಥರಾದ ಸುಳ್ಸೆ ಲಕ್ಷ್ಮೀನಾರಾಯಣ ಕರಣಿಕರನ್ನು ನೌಕೆಯ ನಾವಿಕನನ್ನಾಗಿ ನೇಮಿಸಿದ್ದರು.
ಕರಣಿಕರಂತಹ ನಾವಿಕರ ಸಂಖ್ಯೆ ಹೆಚ್ಚಾದಲ್ಲಿ ಸಮಾಜ ಆರೋಗ್ಯವು ವೃದ್ಧಿಸಲು ಸಾಧ್ಯ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಸ್ಯಶಾಸ್ರ ಪ್ರಾಧ್ಯಾಪಕ, ನಿವೃತ್ತ ಪ್ರಾಂಶುಪಾಲ ದಿ:ಡಾ:ಎಸ್.ಎಲ್.ಕರಣಿಕ್ ಅವರ ಸಂಸ್ಮರಣಾ ಗ್ರಂಥ “ಕರಣಿಕನೆಂಬ ನಾವಿಕ” ಕೃತಿಯನ್ನು ಉಡುಪಿಯಲ್ಲಿ ಲೋಕಾರ್ಪಣೆಗೈಯುತ್ತಾ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಕೃತಿಯ ಪ್ರಧಾನ ಸಂಪಾದಕ ಡಾ:ಪಾದೆಕಲ್ಲು ವಿಷ್ಣು ಭಟ್ಟರು ಪ್ರಸ್ತಾವನೆಗೈಯುತ್ತಾ ಕರಣಿಕರ ಸಮಾಜಮುಖೀ ಸಾಧನೆಗಳನ್ನು ಈ ಕೃತಿಯಲ್ಲಿ ಬಿಂಬಿಸಲಾಗಿದೆ. ಈ ಕೃತಿಯು ವಿದ್ಯಾರ್ಥಿಗಳಿಗೆ, ಕಿರಿಯರಿಗೆ ಅಧ್ಯಯನಯೋಗ್ಯವೆನಿಸಿದೆ ಎಂದರು.
ಸೂರಪ್ಪಯ್ಯ ಕರಣಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ:ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶಂಕರ ಕರಣಿಕ್ ಸ್ವಾಗತಿಸಿ, ಅಮೃತವಲ್ಲೀ ವಂದಿಸಿದರು. ಕರಣಿಕರ ಕೃತಿಯ ಬಗ್ಗೆ ಸದಾಶಿವ ಕರಣಿಕ್, ಪ್ರೊ:ಬಿ.ಎಂ.ಹೆಗ್ಡೆ, ಅರುಣ್ ಸಾಗರ್, ನಿಡುವಜೆ ರಾಮ ಭಟ್ ಪ್ರಶಂಸಿದರು.