Header Ads Widget

ಸಾಧಕ ಮಹೇಶ್ ಶೆಣೈಗೆ ಜಿಲ್ಲಾ ಪ್ರಶಸ್ತಿ


ಸದ್ದಿಲ್ಲದೆ ಸಹಸ್ರಾರು ವೃಕ್ಷಾರೋಪಣ ಮಾಡಿದ ಕಟಪಾಡಿ ಮಹೇಶ ಶೆಣೈ ಇದೀಗ ಸುದ್ದಿಯಲ್ಲಿದ್ದಾರೆ. ಅವರ ನಿಸ್ಪೃಹ ನಿಸ್ವಾರ್ಥ ಸೇವೆಗೆ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.ಸದಾ ಚಟುವಟಿಕೆಯಲ್ಲಿರುವ, ನವೀನ ವಿಷಯ- ವಿಚಾರಗಳ ಬಗ್ಗೆ ಉತ್ಸುಕರಾಗಿರುವ ಶೆಣೈ ಸ್ನೇಹಜೀವಿ. ಪರಿಸರ ಪ್ರೇಮಿ. ಅವರ ಕಾರ್ಯಚಟುವಟಿಕೆಗಳು ದಶಮುಖ, ನಾಲ್ದೆಸೆಗಳಿಗಳಿಗೂ ವಿಸ್ತಾರ.


ಮಿಯಾವಾಕಿ ಎಂಬ ಕಡಿಮೆ ಜಾಗದಲ್ಲಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಸಸಿ ನೆಟ್ಟು ದಟ್ಟ ಕಾಡಿನ ಕಲ್ಪನೆ ಮೂಡಿಸುವ ವಿನೂತನ ಅರಣ್ಯೀಕರಣ ಮಹೇಶ ಶೆಣೈ ಅವರಿಂದ ಇನ್ನಷ್ಟು ಪ್ರಚುರಗೊಂಡಿತು. ಉಡುಪಿ ಜಿಲ್ಲೆಯಲ್ಲಿ ಈ ತರಹದ ವನ ನಿರ್ಮಾಣ ಪರಿಚಯಿಸಿದವರೇ ಶೆಣೈಯವರು.


ಮಹೇಶ ಶೆಣೈ ತನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಾಡಿದ್ದಾರೆ. ಉಡುಪಿ ಯು.ಪಿ.ಎಂ.ಸಿ. ಕಾಲೇಜಿನಲ್ಲಿ ಬಿ.ಬಿ.ಎಂ. ಪದವಿ ಪಡೆದಿದ್ದಾರೆ.


ಮಹೇಶ್ ಪತ್ನಿ ಗೌರಿ ಶೆಣೈ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಉಪನ್ಯಾಸಕಿ. ಆಮಯ ಮತ್ತು ಅನ್ವಿತಾ ಮಕ್ಕಳು