Header Ads Widget

ಪೂರ್ಣಪ್ರಜ್ಞ ಕಾಲೇಜು ಉಡುಪಿಯಲ್ಲಿ ಸಂವಿಧಾನ ದಿನಾಚರಣೆ

ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುವುದು ಅಕ್ಷಮ್ಯ ಅಪರಾಧ, ಸಂವಿಧಾನದ ಮೌಲ್ಯಗಳನ್ನು ಮನದಟ್ಟು ಮಾಡಿಕೊಂಡು ಅದರ ನಿಯಮಗಳಿಗೆ ಬದ್ಧರಾಗಿರಬೇಕು, ನಾವೆಲ್ಲ ಈ ರಾಷ್ಟ್ರದ ಪ್ರಜೆಗಳಾಗಿ ಸಂವಿಧಾನದ ಷರತ್ತುಗಳನ್ನು ಗೌರವಿಸಬೇಕು ಎಂದು ಪೂರ್ಣಪ್ರಜ್ಞ ಅದಮಾರು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊಫೆಸರ್ ನಿತ್ಯಾನಂದ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಸಂವಿಧಾನ ದಿನಾಚರಣೆಯ ಅಂಗವಾಗಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೇಂಜರ್ಸ್ ಮತ್ತು ರೋವರ್ಸ್ ಘಟಕ, ಚುನಾವಣಾ ಸಾಕ್ಷರತಾ ಸಂಘ ಗಳು ಜಂಟಿಯಾಗಿ ಆಚರಿಸಿದ ಸಂವಿಧಾನ ದಿನಾಚರಣೆಯಲ್ಲಿ ಶ್ರೀಯುತರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಮು. ಎಲ್ ಇವರು ಸಂವಿಧಾನದ ಮಹತ್ವ ವಿವರಿಸಿದರು. ವಿವಿಧ ಘಟಕಗಳ ಸಂಯೋಜಕ ರಾದ ಡಾ.ನಾಗರಾಜ್, ಪ್ರೊ. ಸುಪರ್ಣಾ, ಡಾ. ಸತೀಶ್, ಶ್ರೀಮತಿ ಜ್ಯೋತಿ ಆಚಾರ್ಯ, ಡಾ.ಮಹೇಶ್ ಭಟ್,ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕರಾದ ವಿನಯ್ ಕುಮಾರ್ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಎಲ್ಲಾ ತರಗತಿಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪ್ರತಿಜ್ಞಾ ವಿಧಿ ಕೈಗೊಂಡರು.