ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಗುಪ್ತಗಾಮಿನಿ ಸಾಹಿತ್ಯ ಶಾಲೆ ಉಡುಪಿ ಆಶ್ರಯದಲ್ಲಿ ನವೆಂಬರ್ 10ರಂದು ಸಂಜೆ 4:30ಕ್ಕೆ ಲೇಖಕಿ ಇಂದಿರಾ ಜಾನಕಿ ಶರ್ಮ ಅವರ ರಾಮ ಸಾಂಗತ್ಯ ಕೃತಿ ಪ್ರಸ್ತುತಿ ಕಾರ್ಯಕ್ರಮವು ಉಡುಪಿಯ ಹೋಟೆಲ್ ಕಿದಿಯೂರು ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ನಡೆಯಲಿದೆ .
ಕ ಸಾ ಪ ಪೂರ್ವ ರಾಜಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೆ.ಶ್ರೀಕರ ಭಟ್, ಡಾ.ಜಿ.ಪಾರ್ವತಿ ಐತಾಳ್, ಪ್ರೋ. ಜಿ.ಕೆ.ಭಟ್ ಸೇರಾಜೆ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.