Header Ads Widget

​ಸೃಷ್ಟಿ ನೃತ್ಯ ಕಲಾ ಕುಟೀರ ​(ರಿ.) ಉಡುಪಿ ಅರ್ಪಿಸುವ ನೃತ್ಯೋತ್ಸವ 2024

ದಿನಾಂಕ 16.11.2024 ಶನಿವಾರ ದಂದು ಬೆಳಗ್ಗೆ ಸರಿಯಾಗಿ 8.00 ಗಂಟೆಗೆ ರಾಷ್ಟ್ರಮಟ್ಟದ ಭರತನಾಟ್ಯ ಸ್ಪರ್ಧೆಯ​  ಉದ್ಘಾಟನೆ​ ಯನ್ನು ನಿವೃತ್ತ ಪ್ರಾಂಶುಪಾಲರು ಯಕ್ಷಗಾನ ಪಟು ​ಎಂ.ಎಲ್ ಸಾಮಗ ​ನೆರವೇರಿಸಿ, ತದನಂತರ ಸಬ್ ಜೂನಿಯರ್, ಜೂನಿಯರ್,ಸೀನಿಯರ್ ಹಾಗು ಓಪನ್ ವಿಭಾಗದ ಭರತನಾಟ್ಯ ಸ್ಪರ್ಧೆ ನಡೆಯಲಿದೆ.


ಮಧ್ಯಾಹ್ನ 1.30 ಕ್ಕೆ ತಾಳ  ಪ್ರಾತ್ಯಕ್ಷಿಕೆಯನ್ನು ಶ್ರೀ ಮಂಜುನಾಥ್  ಪುತ್ತೂರು ಅವರು ನಡೆಸಿಕೊಡ ಲಿದ್ದಾರೆ.​ ಇದಾದನಂತರ ರಾಷ್ಟ್ರಮಟ್ಟದ ಸಮೂಹ ಭರತನಾಟ್ಯ ಸ್ಪರ್ಧೆ ನಡೆಯಲಿದ್ದು ಸಂಜೆ ಸರಿಯಾಗಿ 4 ಗಂಟೆಗೆ ಸ್ಪರ್ಧೆಯ ಬಹುಮಾನ  ವಿತರಣೆ ನಡೆಯಲಾಗುವುದು. ಸಂಜೆ 7.00 ರಿಂದ  ಸೃಷ್ಟಿ  ನೃತ್ಯ ಕಲಾ  ಕುಟೀರದ ಕಿರಿಯ ವಿದ್ಯಾರ್ಥಿನಿಯರಿಂದ ಭಾರತನಾಟ್ಯ ಕಾರ್ಯಕ್ರಮ ನಡೆಯಲಿದೆ​ ಎಂದು  ಸೃಷ್ಟಿ ನೃತ್ಯ ಕಲಾ ಕುಟೀರ ​(ರಿ.) ಉಡುಪಿ​ಯಾ ವಿದುಷಿ ಮಂಜರಿ ಚಂದ್ರಶೇಖರ್ ತಿಳಿಸಿದರು. 

 
ದಿನಾಂಕ 17.11.2024 ಆದಿತ್ಯವಾರದಂದು ಸಮಯ  9.30 ಕ್ಕೆ ವಿ. ಶುಭಾ ಮಣಿ ಚಂದ್ರಶೇಖರ್ ಇವರಿಂದ ಭರತನಾಟ್ಯ  ಕಾರ್ಯಕ್ರಮವು  ನಡೆಯಲಿದೆ.​ ಸಮಯ 10.25 ಕ್ಕೆ ಕೇರಳದ ನೃತ್ಯ ಪಟು ಶ್ರೀ ಆನಂದ್ ಸಿ ಯಸ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. 11.20 ಕ್ಕೆ ಸರಿಯಾಗಿ ಶ್ರೀ ಪ್ರವೀಣ್ ಕುಮಾರ್ ಬೆಂಗಳೂರು ಇವರ ಶಿಷ್ಯೆಯರಾದ ಕು. ನವ್ಯಶ್ರೀ ಹಾಗು ಕು. ಶ್ರೀಮ ಉಪಾದ್ಯಾಯ ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ . 


ಸಮಯ 1.30 ಕ್ಕೆ ವಿ. ಮೃದುಲಾ ರೈ ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದ್ದು ತದನಂತರ 2.30 ಕ್ಕೆ ಸರಿಯಾಗಿ ವಿ. ರಾಧಿಕಾ ಶೆಟ್ಟಿ ಯವರ ಸಾರಥ್ಯದಲ್ಲಿ ಕರಾವಳಿಯ   ಪ್ರಸಿದ್ಧ ಗುರುಗಳಿಂದ "ನೃತ್ಯ ದಾಸೋಹಂ" ದಾಸ ಸಾಹಿತ್ಯದ ಮೇಲೆ ಆಧಾರಿತ ನೃತ್ಯ ಕಾರ್ಯಕ್ರಮವು  ನಡೆಯಲಿದೆ. ಸಂಜೆ 7.00 ಗಂಟೆಗೆ  ಸಮಾರೋಪ ಸಮಾರಂಭವು ನಡೆಯಲಿದೆ. 


ಮುಖ್ಯ  ಅತಿಥಿಗಳಾಗಿ ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಪ್ರಾಂಶುಪಾಲರು ಡಾ| ಜಾನ್ ಥಾಮಸ್ ಹಾಗು ಶ್ರೀಮತಿ ಶಾಮಿಲಿ ಶಂಕರ್  ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ  ಕರ್ನಾಟಕ ಕಲಾಶ್ರೀ  ಶ್ರೀಮತಿ ಶಾರದಾ ಮಣಿಶೇಖರ್ ಹಾಗು  ಕರ್ನಾಟಕ ಕಲಾಶ್ರೀ  ಶ್ರೀಮತಿ ರಾಜಶ್ರೇ ಉಳ್ಳಾಲ್  ಇವರಿಗೆ "ನಾಟ್ಯ ವಿದ್ವನ್ಮಣಿ" ಎಂಬ ಬಿರುದನ್ನು  ನೀಡಿ ಸನ್ಮಾನಿಸಲಿದ್ದೇವೆ. ಕಲಾ ಸಾಧಕರು ಶ್ರೀ  ಪ್ರಕಾಶ್  ಕುಂಜಿಬೆಟ್ಟು, ಬಾಲಕೃಷ್ಣ  ಕೊಡವೂರು ಹಾಗು  ಸುಮತಿ (ಅಲಕಾನಂದ ) ಇವರಿಗೂ  ಸನ್ಮಾನಿಸಲಿದ್ದೇವೆ​. 


​ಬಳಿಕ ಸೃಷ್ಟಿಯ ಹಿರಿಯ ಕಲಾವಿದೆಯರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ.​ ನಮ್ಮ  ಈ ಕಾರ್ಯಕ್ರಮವು ಪರ್ಯಾಯ ಶ್ರೀ ಪುತ್ತಿಗೆ ಮಠ ದ ಆಶ್ರಯದಲ್ಲಿ ಉಡುಪಿ  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ.​ ಈ ​ಪ ತ್ರಿಕಾಗೋಷ್ಠಿಯಲ್ಲಿ ಅಕ್ಷತಾ ಪವನ್,​ಸ್ಮ್ರಿತಿ ಶ್ರೀರಾಮ್, ಇಲಾ ಶೆಟ್ಟಿ  ಉಪಸ್ಥಿತರಿದ್ದರು.