Header Ads Widget

ಪರ್ಕಳ : ನಿಂತಿದ್ದ ಟ್ಯಾಂಕರ್ ಗೆ ಬೈಕ್ ಢಿಕ್ಕಿ; ಸವಾರ ಸಾವು!

ರಸ್ತೆ ಬದಿ ಕೆಟ್ಟು ನಿಂತಿದ್ದ ಟ್ಯಾಂಕರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಪರ್ಕಳ ಎಸ್‌ಬಿಐ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿ 169 ಎ ಯಲ್ಲಿ ಇಂದು ಅಪರಾಹ್ನ ವೇಳೆ ನಡೆದಿದೆ.

ಮೃತರನ್ನು ಪರ್ಕಳದ ಶೆಟ್ಟಿಬೆಟ್ಟುವಿನ ದೇವು ಪೂಜಾರಿ ಎಂಬವರ ಮಗ ಸೃಜನ್ ಸಾಗರ್(22) ಎಂದು ಗುರುತಿಸಲಾಗಿದೆ.

ಟೈಯರ್ ಪಂಚರ್ ಆಗಿ ರಸ್ತೆಯಲ್ಲಿ ನಿಂತಿದ್ದ ನೀರಿನ ಟ್ಯಾಂಕ್ ಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಇವರು ಮಣಿಪಾಲದ ಕೆಎಂಸಿಯಲ್ಲಿ ಇತ್ತೀಚೆಗೆ ಉದ್ಯೋಗಕ್ಕೆ ಸೇರಿಕೊಂಡಿದ್ದರು.

ಮಣಿಪಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.