Header Ads Widget

ಉಡುಪಿಯ ಶ್ರೀ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ


ಉಡುಪಿಯ ಶ್ರೀ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ರಥಾರೋಹಣ ಕಾರ್ಯಕ್ರಮ ನಡೆಯಿತು. ದೇವಾಲಯವನ್ನು ವಿಶೇಷವಾಗಿ ಹೂಗಳಿಂದ ಅಲಂಕಾರ ಮಾಡಿ, ಬಲಿ ಉತ್ಸವ, ರಥ ಶುದ್ಧಿ, ನರ್ತನ ಬಲಿಯೊಂದಿಗೆ ದೇವರ ರಥಾರೋಹಣ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಹಾಗೂ ಭಂಡಾರಕೇರಿ ಮಠದ ಶ್ರೀಪಾದರ ಉಪಸ್ಥಿತಿಯಲ್ಲಿ ರಥಾರೋಹಣವು ಜರುಗಿತು. ಇದರ ಪ್ರಯುಕ್ತ ನಡೆದ ಅನ್ನಸಂತರ್ಪಣೆ ಅಂಗವಾಗಿ ಪಲ್ಲ ಪೂಜೆಯು ಜರುಗಿತು.