ಕಡ್ತಲ ಗ್ರಾಮೀಣ ಕಾಂಗ್ರೇಸ್ ಹಾಗೂ ಉದಯ್ ಶೆಟ್ಟಿ ಅಭಿಮಾನಿ ಬಳಗ ಕಡ್ತಲ, ಕುಕ್ಕುಜೆ, ಎಳ್ಳಾರೆ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 21/12/2024ರಂದು ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ "ಸೌಹಾರ್ದ ಟ್ರೋಫಿ" 2024-25 ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಎಳ್ಳಾರೆ ಇಲ್ಲಿ ನಡೆಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು ಶ್ರೀ ಗೋಪಿನಾಥ್ ಭಟ್ ಮುನಿಯಲು, ಕಡ್ತಲ ಗ್ರಾಮೀಣ ಕಾಂಗ್ರೇಸ್ ಅಧ್ಯಕ್ಷರು ಶ್ರೀ ಜಗದೀಶ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ರಾಘವ ದೇವಾಡಿಗ, ಭೂ ನ್ಯಾಯ ಮಂಡಳಿ ಸದಸ್ಯರು ರಾಘವ ಕುಕ್ಕುಜೆ, ಕಡ್ತಲ ಗ್ರಾಮ ಪಂಚಾಯತ್ ಸದಸ್ಯರಾದ ದೀಕ್ಷಿತ್ ಶೆಟ್ಟಿ, ರೇಖಾ ಸತೀಶ್, ಸೌಹಾರ್ದ ಟ್ರೋಫಿ 2024-25 ರ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಸಂಪತ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.