ಪೂಜೆ ಪುರಸ್ಕಾರ, ಉತ್ಸವಾದಿಗಳ ಸೀಮಿತ ಚೌಕಟ್ಟನ್ನು ಮೀರಿ ವೈವಿಧ್ಯಮಯ ಸಾಮಾಜಿಕ ಸಾಂಸ್ಕೃತಿಕ ಸಾಮುದಾಯಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನವು ಮಾದರಿಯಾಗಿದೆ ಎಂದು ಕುಂದಾಪುರದ ಶಾಸಕ ಶ್ರೀ ಕಿರಣ್ ಕುಮಾರ ಕೊಡ್ಗಿಯವರು ದೀಪೋತ್ಸವದ ಸಂದರ್ಭದಲ್ಲಿ ಸಾಧಕರಿಗೆ ಶುಭ ಹಾರೈಕೆಯ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಗಮಾಗಮ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದ ಘೋಷದ ನಂತರ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗರು ಸ್ವಾಗತಿಸಿದರು. ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ವಿಜಯಕುಮಾರ ಅಡಿಗ, ಶ್ರೀಧರ ಉಳಿತ್ತಾಯ,ಸುಜಯೀಂದ್ರ ಹಂದೆ, ನರೇಂದ್ರ ಕುಮಾರ ಕೋಟ, ಪಿ.ವಿ.ಆನಂದ ಸಾಲಿಗ್ರಾಮ, ಕಾರ್ಕಡ ತಾರಾನಾಥ ಹೊಳ್ಳ,( ಗೆಳೆಯರ ಬಳಗ ),ಕೋಡಿ ಕನ್ಯಾನ ಗೋಪಾಲ ಖಾರ್ವಿ, ಸತೀಶ್ಚಂದ್ರ ಶೆಟ್ಟಿ, ಗ್ರಾಮಮೊಕ್ತೇಸರ ಜನಾರ್ದನ ಹೊಳ್ಳ,ಚಿತ್ತೂರು ಪ್ರಭಾಕರ ಆಚಾರ್ಯ ಮತ್ತು ಬಾಲ ಪ್ರತಿಭೆ ಕು.ಸಮೃದ್ಧಿ ಮೊಗವೀರರಿಗೆ ಶ್ರೀ ಕ್ಷೇತ್ರದ ವತಿಯಿಂದ ಶುಭವನ್ನು ಹಾರೈಸಲಾಯಿತು. ಪಟ್ಟಣ ಪಂಚಾಯತು ಅಧ್ಯಕ್ಷೆ ಶ್ರೀಮತಿ ಸುಕನ್ಯಾ ಶೆಟ್ಟಿ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಶುಭಾಶಂಸನೆಗೈದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಗಣೇಶ ಮೂರ್ತಿ ನಾವಡ ಮತ್ತು ಸದಸ್ಯ ಸದಾಶಿವ ಐತಾಳ ಅತಿಥಿಗಳನ್ನು ಗೌರವಿಸಿದರು. ಇನ್ನೋರ್ವ ಸದಸ್ಯ ಎ.ವಿ.ಶ್ರೀಧರ ಕಾರಂತರು ಧನ್ಯವಾದ ಸಮರ್ಪಣೆ ಮಾಡಿದರು. ಶ್ರೀಮತಿ ನಾಗರತ್ನ ಹೇರ್ಳೆ ಮತ್ತು ಅಕ್ಷತಾ ಗಿರೀಶ ಐತಾಳರು ಕಾರ್ಯಕ್ರಮವನ್ನು ನಿರೂಪಿಸಿದರು.