Header Ads Widget

ಅದ್ಭುತ ಹಾಡುಗಾರ ಬಿ. ಕೃಷ್ಣ ಕಾರಂತ್ ಇನ್ನಿಲ್ಲ

ದೇಶದ ಪ್ರಸಿದ್ಧ ರಂಗಕರ್ಮಿ ದಿವಂಗತ ಬಿ. ವಿ. ಕಾರಂತರ ಸಹೋದರ ಬಿ. ಕೃಷ್ಣ ಕಾರಂತರು (76)  ದಶಂಬರ 12 ರ ಅಪರಾನ್ನ ದೈವಾಧೀನರಾದರು. ಉಡುಪಿ ಎಂಜಿಎಂ ಕಾಲೇಜಿನ ರೀಜನಲ್ ರಿಸರ್ಚ್ ಸೆಂಟರ್ ( RRC) ನ ನಿವೃತ್ತ ಉದ್ಯೋಗಿಯಾಗಿದ್ದ ಇವರು ಅದ್ಭುತ ಹಾಡುಗಾರರಾಗಿದ್ದರು. ಇವರ ಸಂಗೀತ ಕಾರ್ಯಕ್ರಮಗಳು, ಇವರ ಹಾಡಿನ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿದ್ದವು. ರಂಗಭೂಮಿ ಉಡುಪಿಯ ಸದಸ್ಯರಾದ ಇವರು ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಹಿನ್ನೆಲೆ ಹಾಡುಗಾರರಾಗಿ ಬಹಳಷ್ಟು ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸಾಂಸ್ಕೃತಿಕ ರಂಗಕ್ಕೆ ನೀಡಿರುವ ಕೊಡುಗೆಗಾಗಿ ಇವರನ್ನು ಇತ್ತೀಚಿಗೆ ರಂಗಭೂಮಿ ಉಡುಪಿ ಸಂಸ್ಥೆಯು ಗೌರವಿಸಿ ಸನ್ಮಾನಿಸಿತ್ತು. 

ರಂಗಭೂಮಿಯ ಎಲ್ಲಾ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದ ಇವರ ಅಗಲುವಿಕೆ ಸಂಗೀತ ಹಾಗೂ ನಾಟಕ ರಂಗಕ್ಕೆ ಅಪಾರ ನಷ್ಟ. 

ಮೃತರ ಅಂತಿಮ ದರ್ಶನಕ್ಕೆ ಅವಕಾಶವು ಉಡುಪಿ ಕಿದಿಯೂರಿನಲ್ಲಿ ಇರುವ ಅವರ ಮನೆಯಲ್ಲಿ ಡಿ. 13ರ ಬೆಳಿಗ್ಗೆ ಸುಮಾರು 11.30 ರ ನಂತರ ಇರುವುದು ಹಾಗೂ ವಿದೇಶದಲ್ಲಿ ಇರುವ ಬಿ. ಕೆ ಕಾರಂತರ ಮಗ ಬಂದ ನಂತರ ಮೃತರ ಅಂತಿಮ ವಿಧಿವಿಧಾನವು ಸಂಜೆ ಸುಮಾರು 6.30 ರ ಹಾಗೆ ಉಡುಪಿ ಇಂದ್ರಾಳಿಯ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಅವರ ಬಂಧುಗಳು ತಿಳಿಸಿದ್ದಾರೆ. ವಯಸ್ಸು (76), 

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ಅಪರಾಹ್ನ ನಿಧನರಾದರು. ಪತ್ನಿ, ಈರ್ವರು ಪುತ್ರರು, ಬಂಧುಗಳಗವನ್ನು ಹಾಗೂ ಅಪಾರ ಸಂಖ್ಯೆಯ ಅವರ ಕಲಾಭಿಮಾನಿ ಬಳಗವನ್ನು ಅಗಲಿದ್ದಾರೆ.

ಮೇರು ಸಾಧಕರಿಗೆ ರಂಗಭೂಮಿ (ರಿ) ಉಡುಪಿಯ ಭಾವಪೂರ್ಣ ಶ್ರದ್ಧಾಂಜಲಿ