Header Ads Widget

"ರಾಷ್ಟ್ರದ ಹಿತಾಸಕ್ತಿ ಕಾಪಾಡುವುದೇ ವಿದೇಶಾಂಗ ನೀತಿಯ ಪ್ರಥಮ ಪ್ರಾಶಸ್ತ್ಯ" ~ಪ್ರೊ.ಶೆಟ್ಟಿ

ಉಡುಪಿ :ರಾಷ್ಟ್ರ ರಾಷ್ಟ್ರಗಳ ನಡುವಿನ ರಾಜಕೀಯ ಆಥಿ೯ಕ ಸಾಂಸ್ಕೃತಿಕ ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲಿನ ಸಂಬಂಧಗಳನ್ನು ನಿಧ೯ರಿಸುವ ತಂತ್ರಗಾರಿಕೆಯೇ ವಿದೇಶಾಂಗ ನೀತಿ.ವಿದೇಶಾಂಗ ನೀತಿ ರೂಪಿಸುವುದು ಒಂದು ಕಲೆ ಮತ್ತು ತಂತ್ರಗಾರಿಕೆ.ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವದು ಪ್ರತಿಯೊಂದು ರಾಷ್ಟದ ಮೊದಲ ಆದ್ಯತೆ "ಎಂದು ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ ನಿವೃತ್ತ ಮುಖ್ಯಸ್ಥ ರಾಜ್ಯ ಶಾಸ್ತ್ರ ವಿಭಾಗ ಎಂಜಿಎಂ ಕಾಲೇಜು ಉಡುಪಿ ಇವರುಅಭಿಪ್ರಾಯಿಸಿದರು.ಉಡುಪಿ ಮತ್ತು ಉದ್ಯಾವರ ರೇೂಟರಿ ಕ್ಲಬ್‌ ನವರು ಜಂಟಿಯಾಗಿ ಉಡುಪಿ ಕಡಿಯಾಳಿಯ ರೇೂಟರಿ ಭವನದಲ್ಲಿ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ವಿಶ್ವದ ವಿದ್ಯಾಮಾನಗಳು ಭಾರತದ ಮೇಲಾಗುವ ಪರಿಣಾಮಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಿ ಅಭಿಪ್ರಾಯವಿತ್ತರು.

ಸಭಾ ವೇದಿಕೆಯಲ್ಲಿ ಉಡುಪಿ ರೇೂಟರಿ ಅಧ್ಯಕ್ಷ ರೇೂ.ಗುರುರಾಜ್ ಭಟ್ಟ;ಉದ್ಯಾವರ ರೇೂಟರಿ ಅಧ್ಯಕ್ಷ ರೇೂ.ಜೀವನ್ ಡಿ ಸೇೂಜಾ;ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಡುಪಿ ರೇೂಟರಿ ಕಾರ್ಯದಶಿ೯ ವೈಷ್ಣವಿ ಆಚಾರ್ಯ ವಂದಿಸಿದರು.ಅನಂತರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.