Header Ads Widget

ಶ್ರೀ ಕ್ಷೇತ್ರ ಸಾಲಿಗ್ರಾಮದಲ್ಲಿ ಶಾಕಲ ಋಕ್ಸಂಹಿತಾ ಯಾಗಕ್ಕೆ ವಿದ್ಯುಕ್ತ ಚಾಲನೆ


18/12/24 ರ ಬುಧವಾರ ಸಂಜೆ ಮಂಟಪ ಸಂಸ್ಕಾರಕ್ಕೆ ಮುನ್ನ ಶ್ರೀ ದೇವರ ಸಮ್ಮುಖದಲ್ಲಿ ಫಲ ಪ್ರಾರ್ಥನೆಯನ್ನು ಸಲ್ಲಿಸಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ತಂತ್ರಿ ವರೇಣ್ಯ ಶ್ರೀ ಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ 19 ರ ಗುರುವಾರದಿಂದ ತೊಡಗಿ 26 ರ ಗುರುವಾರದವರೆಗೆ ನಡೆಯಲಿರುವ ಶಾಕಲ ಋಕ್ಸಂಹಿತಾ ಯಾಗದ* ನಿರ್ವಿಘ್ನ ಸಂಪನ್ನತೆಗೆ ಶ್ರೀ ದೇವರ ಅನುಗ್ರಹವನ್ನು ಕೋರಿದರು. ಈ ಸಂದರ್ಭದಲ್ಲಿ ಕೋಶಾಧಿಕಾರಿ ಪರಶುರಾಮ ಭಟ್ಟ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ ಮತ್ತು ಪೂರ್ವ ಉಪಾಧ್ಯಕ್ಷ ಗೆಳೆಯರ ಬಳಗ ತಾರಾನಾಥ ಹೊಳ್ಳರು ಉಪಸ್ಥಿತರಿದ್ದರು. 19/12/24 ರ ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಶುರುವಾಗಿ 11.25 ಕ್ಕೆ ನಡೆಯುವ ಸಂಹಿತಾಭಿಷೇಕದಲ್ಲಿ ಭಾಗವಹಿಸಿ ಮಹಾ ಮಂಗಳಾರತಿಯ ನಂತರ ಭೋಜನ ಪ್ರಸಾದವನ್ನು ಸ್ವೀಕರಿಸಿ ಶ್ರೀ ಮದ್ಯೋಗಾನಂದ ಗುರು ನರಸಿಂಹನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಭಕ್ತವೃಂದದವರಲ್ಲಿ ಅಧ್ಯಕ್ಷ ಡಾ.ಕಾರಂತರು ವಿನಂತಿಸಿಕೊಂಡಿದ್ದಾರೆ.