Header Ads Widget

ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಆಯ್ಕೆ

ಉಡುಪಿ :ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯವರು ನೀಡುವ ರಾಜ್ಯ ಮಟ್ಟದ ವಿವಿಧ ಕಲಾಪ್ರಕಾರಗಳ ಪ್ರೋತ್ಸಾಹದಲ್ಲಿ 2024-25ನೇ ಸಾಲಿನಲ್ಲಿ ಭರತನಾಟ್ಯ ವಿಭಾಗದಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ ಭವಾನಿ ಶಂಕರ್ ರವರ ಶಿಷ್ಠೆಯರಾದ ಕು| ಸ್ವಾತಿ ಹಾಗೂ ಕು| ಅದಿತಿ ಜಿ ಮಂಡೀಚ ಆಯ್ಕೆಯಾಗಿರುತ್ತಾರೆ.

ಕು| ಅದಿತಿ ಜಿ ಮಂಡೀಚ ನಿಟ್ಟೆಯ ಎನ್.ಎಂ.ಎ.ಎಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪೃಥಮ ವರ್ಷದ ಬೀ.ಟೆಕ್ ಪದವಿ ವ್ಯಾಸಂಗ ಮಾಡುತ್ತಿದ್ದು, ಗುರುಪ್ರಸಾದ್ ಮಂಡೀಚ ಹಾಗೂ ಸುಮಂಗಲಾ ಮಂಡೀಚ ದಂಪತಿಗಳ ಪುತ್ರಿ. 

ಕು |ಸ್ವಾತಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು,ಅಜ್ಜರಕಾಡಿನಲ್ಲಿ ತೃತೀಯ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದು ಸತ್ಯಶಂಕರ ಭಟ್ ಹಾಗೂ ಗೀತಾಸರಸ್ವತಿ ಕೆ ದಂಪತಿಗಳ ಪುತ್ರಿ.