ಎಸ್.ಡಿ.ಏಮ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕುತ್ಪಾಡಿ, ಉಡುಪಿ ಎಸ್.ಡಿ.ಏಮ್. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿಯ, ಆಂತರಿಕ ಗುಣಮಟ್ಟದ ಭರವಸೆಯ ಕೋಶ ಪಿ.ಜಿ ಮತ್ತು ಪಿಎಚ್. ಡಿ. ವಿಭಾಗದ ವತಿಯಿಂದ ದಿನಾಂಕ 28/11/24 ರಂದು, ಸಂಸ್ಕಾರ ಇಂಡಕ್ಷನ್ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ 2024-25ರ ಹೊಸ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಕಾಲೇಜಿನ ವಿವಿಧ ಸೌಲಭ್ಯಗಳನ್ನು ಸ್ನಾತಕೋತ್ತರ ವಿದ್ಯಾರ್ಜನೆಯ ಸಮಯದಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ಪರಿಚಯಿಸಲಾಯಿತು.
ಎಸ್.ಡಿ.ಏಮ್. ಆಯುರ್ವೇದ ಕಾಲೇಜು, ಉಡುಪಿಯ ಪ್ರಾಂಶುಪಾಲರಾದ ಡಾ.ಮಮತಾ .ಕೆ.ವಿಯವರು ಕಾರ್ಯಕ್ರಮದ ಅಧ್ಯಕ್ಷರಾಗಿ, ಹೊಸವಿದ್ಯಾರ್ಥಿಗಳಿಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಖಾಸಗಿ ಆಯುರ್ವೇದ ಕಾಲೇಜುಗಳಲ್ಲಿ ದೇಶದಲ್ಲೇ ಮೊದಲ ಸ್ಥಾನವನ್ನುಗಳಿಸಿದ ಈ ಕಾಲೇಜಿನ ಗುಣಮಟ್ಟವನ್ನು ಉಳಿಸಿ ಬೆಳೆಸುವಲ್ಲಿ ನಿಮ್ಮ ಪಾತ್ರ ಮಹತ್ತರವಾದದ್ದು ಹಾಗಾಗಿ ಕಾಲೇಜಿನ ಎಲ್ಲಾ ಮೂಲ ಸೌಕರ್ಯಗಳನ್ನು ಚೆನ್ನಾಗಿ ಉಪಯೋಗಿಸಿ ಮುಂಬರುವ ದಿನಗಳಲ್ಲಿ ಉತ್ತಮ ಗುಮಟ್ಟದ ತಜ್ಞವೈದ್ಯರಾಗಿ, ಸಂಶೋಧಕರಾಗಿ, ವಾಣಿಜ್ಯೋದ್ಯಮಿಗಳಾಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ನೀಡುವಂತವರಾಗಬೇಕೆಂದು ಕರೆನೀಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ನಾಗರಾಜ್ .ಎಸ್.ರವರು ಉದಯೋನ್ಮುಖ ಸ್ನಾತಕೋತ್ತರ ವಿದ್ಯಾರ್ಥಿಗಳನ್ನುದ್ದೇಶಿಸಿ, ಇಡೀ ದೇಶದಲ್ಲೇ ಹೆಸರುವಾಸಿಯಾದ ಈ ವಿದ್ಯಾಲಯವು ಹಲವಾರು ನುರಿತ ಹಿರಿಯ ಹೆಸರಾಂತ ಹಳೆಯ ವೈದ್ಯರ ಶ್ರಮದ ಫಲವಾಗಿದ್ದು ಇಂತಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡಲು ಆಗಮಿಸಿರುವ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಅದ್ರುಷ್ಟವಂತರಾಗಿದ್ದು ಸಂಸ್ಥೆಯ ಎಲ್ಲಾ ಚಟುವತಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ತಿಳಿಸಿದರು. ಕೇವಲ ತಮ್ಮ ತಮ್ಮ ವಿಭಾಗಗಳಿಗೆ ಸೀಮಿತಗೊಳ್ಳದೇ ಇತರೆ ತಜ್ಞರೊಂದಿಗೆ ಪ್ರಶ್ನೋತ್ತರಗಳನ್ನು ನಡೆಸಿ ಜ್ಞಾನವನ್ನು ವೃದ್ಧಿಗೊಳಿಸಬೇಕು ತನ್ಮೂಲಕ ನುರಿತ ತಜ್ಞ ವೈದ್ಯರಾಗಿ ಸಮಾಜ ಸೇವೆಯನ್ನು ಮಾಡಬೇಕೆಂದು ಕರೆ ನೀಡಿದರು. ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ.ವೀರಕುಮಾರರವರು ಪಿ.ಜಿ ಮತ್ತು ಪಿಎಚ್. ಡಿ. ವಿಭಾಗದ ಡೀನ್ ರವರಾದ ಡಾ.ಆಶೊಕ್ ಕುಮಾರ್ ಬಿ.ಎನ್.ರವರು ಕಾರ್ಯಕ್ರಮದಲ್ಲಿ ಗೌರವೊಪಸ್ಥಿತರಾಗಿದ್ದರು.
ರೋಗನಿದಾನ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್ ರವರು ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ.ಮಹೇಶ್ವರಿ, ಡಾ. ಮಂಜುಶ್ರೀ ಪ್ರಾರ್ಥಿಸಿದರು. ಹಿರಿಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾಲೇಜಿನಲ್ಲಿನ ತಮ್ಮಅನುಭವಗಳನ್ನು ಹಂಚಿಕೊಳ್ಳುವುದಲ್ಲದೆ ಅಗಾಮಿ ಹೊಸ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹೊಸ ವಿದ್ಯಾರ್ಥಿಗಳು ತಮ್ಮ ಆತ್ಮ ಪರಿಚಯವನ್ನು ಮಾಡಿದರು. ಕಾರ್ಯಕ್ರಮದ ಸಂಯೋಜಕಿ ಬಾಲರೋಗ ವಿಭಾಗದ ಸಹಪ್ರಾಧ್ಯಾಪಕಿ ಡಾ.ಸಹನಾ ಶಂಕರಿಯವರು ವಂದಿಸಿದರು. ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ, ಡಾ.ಸೌಮ್ಯ ಭಟ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.