ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ 29/12/24 ರಂದು ಏರ್ಪಡಿಸಿದ್ದ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮದಲ್ಲಿ ಕೂಟ ಬಂಧು ಕಾರ್ಕಡ ತಾರಾನಾಥ ಹೊಳ್ಳರನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅನುಗ್ರಹಿಸಿದರು. ಜಗತ್ತಿನ ಪದಾಧಿಕಾರಿಯಾಗಿ ವಿವಿಧ ಸ್ತರದಲ್ಲಿ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿರುವ ಶ್ರೀ ಹೊಳ್ಳರು ಸದ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕಾರ್ಯಕಾರಿ ಸದಸ್ಯರೂ ಆಗಿದ್ದು ಈ ಸಾಲಿನ ಉಡುಪಿ ಜಿಲ್ಲಾ ಸ್ತರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು.