Header Ads Widget

​ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ: ಮನೆ ಮನೆ ಭಜನಾ ಶತ ಸಂಭ್ರಮ

ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಆಶ್ರಯದಲ್ಲಿ​ ಮಾಯಾ​ ಕಾಮತ್ ಈಶ್ವರ ನಗರ ಮಣಿಪಾಲ ಇವರ ನೇತೃತ್ವದಲ್ಲಿ ಮನೆ  ಮನೆ ಭಜನಾ ಶತ ಸಂಭ್ರಮವು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಇತ್ತೀಚಿಗೆ   ಜರಗಿತು.​  ಸುಗುಣ ಶೆಟ್ಟಿಯವರು ಎಕಕಾಲ ದಲ್ಲಿ ಭಜನೆ ಮತ್ತು ಕುಣಿತ ಭಜನೆಯ ಉದ್ಘಾಟನೆಯನ್ನು ನೇರವೇರಿಸಿದರು. ಸಭೆಯ ಸಭಾ ​ ಅಧ್ಯಕ್ಶತೆಯನ್ನು ಅಂಬಲಪಾಡಿಯ ಧರ್ಮದರ್ಶಿ​ ಡಾ. ನಿ. ಬೀ ವಿಜಯ ಬಲ್ಲಾಳ್ ಇವರು ವಹಿಸಿ​ದ್ದರು. 

ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೋಹನ್ ಭಟ್ ( ಅಧ್ಯಕ್ಷರು ಪರಿವರ್ತನಾ ಫೌಂಡೇಶನ್ ರಿ ಉಡುಪಿ ) ಶ್ರೀಕಾಂತ್ ನಾಯಕ್ (ಉಡುಪಿ​ ಬಿಜೆಪಿ ಜಿಲ್ಲಾ ಕಾರ್ಯಧರ್ಶಿ ), ಡಾ. ಗಣೇಶ್ ಗಂಗೊಳ್ಳಿ ( ಕನ್ನಡ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷರು ), ಶ್ರೀ ಮಂಜುನಾಥ್ ಮಣಿಪಾಲ (ಈಶ್ವರ ನಗರ ವಾರ್ಡ್ ನ ನಗರ ಸಭಾ ಸದಸ್ಯರು ), ಶ್ರೀ ಸಹನಶೀಲ ಪೈ (  ಅಧ್ಯಕ್ಷರು ಜಿಲ್ಲಾ ವರ್ತಕರ ಸಂಘ ಉಡುಪಿ ), ಶ್ರೀಮತಿ ಸಹನಾ ಕಾಮತ್ ಕೆನರಾ ಬ್ಯಾಂಕ್  ಮಂಗಳೂರು ),ನೇತ್ರಾವತಿ ಉಡುಪಿ ( ಏಕತ್ವ ಭಜನಾ ಮಂಡಳಿಯ ಅಧ್ಯಕ್ಷರು ), ಶ್ರೀಮತಿ ಮೋಹಿನಿ ಭಟ್ ಮಂಜೇಶ್ವರ ( ಅಧ್ಯಕ್ಷರು :ಶ್ರೀ ಮಹಾಮಾಯಾ ಭಜನಾ ಮಾಡಲಿ ಈಶ್ವರ ನಗರ  ಮಣಿಪಾಲ )  ಸವಿತಾ ಶೆಟ್ಟಿ ಈಶ್ವರ ನಗರ ಮಣಿಪಾಲ, (ನಿರೂಪಣೆ )ಉಪಸ್ಥಿತರಿದ್ದರು. 


ವಿವಿಧ ಕ್ಷೇತ್ರಗಳಲ್ಲಿ  ಸಾಧನೆ ಮಾಡಿದ ವಿನೋದ್ ಮಂಚಿ ( ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ) ನೇತ್ರಾವತಿ ಉಡುಪಿ (ಭಜನೆ )​ ಅಶ್ವಿನಿ ಪ್ರಗತಿ ನಗರ (ನೃತ್ಯ ಗುರು ), ಪ್ರೇಮಾ ಕಿಣಿ  ಬಿಜಾಡಿ ( ಭಜನೆ ) ನಿತ್ಯಾನಂದ ನಾಯಕ್ (ಹಾರ್ಮೋನಿಯಂ ಕಲಾವಿದರು )ನಾಗರಾಜ ಕಾರ್ವಿ ( ತಬಲ ವಾದಕರು ) ಸನ್ಮಾನಿಸಲಾಯಿತು.  

ರಮ್ಯ ಮಲ್ಯ, ದೀಪಾ ಪೈ, ನಂದಿನಿ ಶೆಣೈ, ಶುಭಾ ಭಂಡಾರಕರ್, ವಿದ್ಯಾ. ​ಎಸ್  ನಾಯಕ್, ಪುಷ್ಪ ರಾಜನ್, ಗೀತಾ ವಿಠ್ಠಲ್ ಯುಕ್ತಾವತಿ,​  ಶಕುಂತಲಾ, ಆಶಾ, ಗಿರಿಜಾ, ಸುಮಿತ್ರಾ,ಅರುಣ, ಯಶೋದಾ, ಪ್ರಭಾ ರಾವ್, ವನಿತಾ ಸಾಮಂತ್, ಶ್ರೀಲತಾ, ಹಾಗೂ  ಭಜನಾ ಮಂಡಳಿಯ ಸದಸ್ಯರು  ಉಪಸ್ಥಿತ ರಿದ್ದರು.