Header Ads Widget

ಟೆಕ್ನೋ ಟೈಟಾನ್ಸ್ ಪ್ರೀ ಕ್ವಾರ್ಟರ್ ಫೈನಲಗೆ ಲಗ್ಗೆ

ಶಾರ್ಜಾದಲ್ಲಿ ಜರಗುತ್ತಿರುವ ಪ್ರತಿಷ್ಠಿತ ಬಾಂಬೆ ಪ್ರೀಮಿಯರ್ ಲೀಗ್ ಸೀಸನ್ - 5 ರ ಪಂದ್ಯಾಕೂಟದಲ್ಲಿ ಉಡುಪಿ,ಮಂಗಳೂರು ಜಿಲ್ಲೆಯ ಬಹುತೇಕ ಕ್ರೀಡಾಪಟುಗಳನ್ನು ಹೊಂದಿರುವ ಶಾರ್ಜಾದ ಟೆಕ್ನೋಟೈಟಾನ್ಸ್ ತಂಡವು ಪ್ರಿ ಕ್ವಾರ್ಟರ್ ಫೈನಲಗೆ ಲಗ್ಗೆ ಇಟ್ಟಿದೆ.

ಶಾರ್ಜಾದಲ್ಲಿ ಇತ್ತೀಚೆಗೆ ಜರಗಿರುವ ಅನೇಕ ಪಂದ್ಯಗಳಲ್ಲಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಟೆಕ್ನೋ ಟೈಟಾನ್ಸ್ ತಂಡವು ಮುಡಿಗೇರಿಸಿಕೊಂಡಿದೆ.

ಉಡುಪಿ ಕಟೀಲ್ ಮಂಗಳೂರು ಕಾಪು ಕುಂದಾಪುರ ಸಮೀಪದ ಅನೇಕ ಆಟಗಾರರನ್ನು ಹೊಂದಿರುವ ಟೆಕ್ನೋ ಟೈಟಾನ್ಸ್ ತಂಡಕ್ಕೆ ಸೂರಾಲಿನ ವಿಠಲ್ ರೀಶಾನ್, ನಾಯಕರಾಗಿದ್ದು ವಿಶ್ವ ಉಪನಾಯಕರಾಗಿದ್ದಾರೆ.

ಉಡುಪಿಯ ಹಮ್ದಾನ್ ಕಟೀಲಿನ ಶಿವ,ಗುರುಪ್ರಸಾದ, ರಂಜಿತ, ಮಂಗಳೂರಿನ ರಂಜಿತ್ ಶೆಟ್ಟಿ,ದಿನೇಶ್ ರೈ,ರವಿ, ಆಶಿಕ್,ನದೀಮ್,ಆಸೀಫ್, ತಮಿಳುನಾಡಿನ ಎಸ್ಕೆ ಯವರನ್ನು ಸೇರಿಕೊಂಡು ಕ್ವಾರ್ಟರ್ ಫೈನಲಿನಲ್ಲಿ ಶಾರ್ಜಾದ ಪ್ರಭಲ ತಂಡ ರೆಡ್ ಸ್ಟಾರ್ ತಂಡದ ಜೊತೆ ಸೆಣಸಲಿದೆ.

ಶಾರ್ಜಾದ ಪ್ರಸಿದ್ಧ ಕ್ರಿಕೆಟ್ ಮೈದಾನದಲ್ಲಿ ಜರಗಲಿರುವ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.