ಅಂತರಾಷ್ಟ್ರೀಯ ಕ್ರೀಡಾ ತರಬೇತಿ ಅಕಾಡೆಮಿ ರೈಸಿಂಗ್ ರೂಸ್ ಆಸ್ಟ್ರೇಲಿಯಾ ಇದರ ವತಿಯಿಂದ ಉಡುಪಿಯ ಶಾರದಾ ರೆಸಿಡೆನ್ಸಿಯಲ್ ಇದರ ವಿದ್ಯಾರ್ಥಿಗಳಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಶಾರದಾ ರೆಸಿಡೆನ್ಸಿಯಲ್ ಶಾಲೆಯ ನಿರ್ದೇಶಕರಾದ ಶ್ರೀ ವಿದ್ಯಾವಂತ ಆಚಾರ್ಯ ಪ್ರಾಂಶುಪಾಲರದ ಶ್ರೀ ವಿನ್ಸೆಂಟ್ ಡಿಕೋಸ್ಟ ರೈಸಿಂಗ್ ರೂಸ್ ಆಸ್ಟ್ರೇಲಿಯಾ ರೈಸಿಂಗ್ ರೂಸ್ ಆಸ್ಟ್ರೇಲಿಯಾದ ಪ್ರತಿನಿಧಿ ಸಮಾಜ ಸೇವಕ ಕೆ ಮಹೇಶ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ತರಬೇತಿಯ ಲಾಭವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ಶ್ರೀ ವಿದ್ಯಾವಂತ ಆಚಾರ್ಯ ಕರೆಕೊಟ್ಟರು.ರೈಸಿಂಗ್ ರೂಸ್ ಆಸ್ಟ್ರೇಲಿಯಾ ಇದರ ಪ್ರವರ್ತಕರಾದ ಶ್ರೀ ಸುಧೀರ್ ನಾಯಕ್ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ತರಬೇತಿಯು ಪ್ರತಿಯೊಬ್ಬರಿಗೂ ಸುಲಭವಾಗಿ ಲಭ್ಯವಿರಬೇಕು ಎಂಬ ಉದ್ದೇಶದಿಂದ ಈ ಕಾರ್ಯಗಾರವನ್ನು ನಡೆಸಲಾಗುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಇವರು ಕಾರ್ಯಕ್ರಮವನ್ನು ನಡೆಸಿದರು.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಖ್ಯಾತ ತರಬೇತುದಾರರಾದ ರಿಚರ್ಡ್ ಕ್ಲಿಫ್ಟನ್, ಫೌಲ್ ಮಂಟೇಗ್ರಾಮಿ, ಜೇಸನ್ ಕಾಕ್ಸ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿಯೋಲ ಅವರು ಕಾರ್ಯಕ್ರಮ ನಡೆಸಿ ಕೊಟ್ಟಿದ್ದು ಶಾರದಾ ರೆಸಿಡೆನ್ಸಿಯಲ್ ಶಾಲೆಯ ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಕರು, ಶಿಕ್ಷಕೇತರ ವೃಂದ, ಯುವ ಉದ್ಯಮಿ ಕಟಪಾಡಿ ಗೌತಮ್ ಕಾಮತ್ ಇವರು ಉಪಸ್ಥಿತರಿದ್ದರು ಶ್ರೀಮತಿ ಗಾಯತ್ರಿ ಸುಧೀರ್ ನಾಯಕ್ ಇವರು ಧನ್ಯವಾದ ಸಮರ್ಪಿಸಿದರು.