ದುಬೈಯಲ್ಲಿ ಇತ್ತೀಚೆಗೆ ಡೂವೆಲ್ತ್ ಹಾಗೂ ಗಲ್ಫ್ ಕರ್ನಾಟಕ ಸಂಸ್ಥೆಯು ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ವಿದ್ವಾರ್ ಬಾಯ್ಸ್ ಮಂಗಳೂರು ಮೆಜಿಷಿಯನ್ಸ್ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಯುಎಇಯ ಅಜ್ಞಾನ್ ಕ್ರಿಕೆಟ್ ಮೈದಾನದಲ್ಲಿ ದುಬೈನ ಡೂವೆಲ್ತ್ ಹಾಗೂ ದುಬೈ ಕರ್ನಾಟಕ ಬಳಗ ಆಯೋಜಿಸಿದ ಈ ರೋಮಾಂಚಕಾರಿ ಕೂಟದ ಅಂತಿಮ ಪಂದ್ಯದಲ್ಲಿ ಶ್ರೀವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿದ್ವಾರ ಬಾಯ್ಸ್ ಮೆಜಿಷಿಯನ್ ತಂಡವು ಟೀಮ್ ಎಲೆಗೆಂಟ್ ಮೂಡುಬಿದ್ರೆ ತಂಡವನ್ನು ಭರ್ಜರಿಯಾಗಿ ಮಣಿಸಿ ಈ ಭಾರಿಯ ಚಾಂಪಿಯನ್ ಪ್ರಶಸ್ತಿಯನ್ನು ಬಗಲಿಗೇರಿಸಿಕೊಂಡಿದೆ.
ಕರ್ನಾಟಕದ ಆಯ್ದ ಹದಿನಾರು ತಂಡಗಳು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿತ್ತು. ಕನ್ನಡಿಗರಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಅವಕಾಶ ನೀಡಲಾಗಿತ್ತು.
ಬಹುತೇಕ ಉಡುಪಿ ಮಂಗಳೂರು ಕುಂದಾಪುರದ ಆಟಗಾರರನ್ನು ಹೊಂದಿದ್ದ ವಿದ್ವಾರ್ಸ ಬಾಯ್ಸ್ ತಂಡವು ಸೂರಾಲಿನ ವಿಠಲ ರಿಷಾನ್ ನಾಯಕ್ ಅವರ ಅನುಭವೀ ಮಾರ್ಗದರ್ಶನದಲ್ಲಿ ನಾಯಕ ಶಹಾಬುದ್ದೀನ್ ನೇತೃತ್ವದಲ್ಲಿ ಕಣಕ್ಕೆ ಇಳಿದಿತ್ತು. ಉಳಿದಂತೆ ಕುಂದಾಪುರದ ರಾಜಾ ಸಾಲಿಗ್ರಾಮ,ಉಡುಪಿಯ ಅಂಕಿತ್,ವೈಭವ್,ಯಶ್, ರೋಹಿತಪುಟ್ಟ,ಮಂಗಳೂರಿನ ಎಂಬಿ,ನೌಫಾಲ್,ದೀಪಕ್, ಪ್ರಣೀತ,ಪೆರ್ಡೂರಿನ ನಿಕೇತನ,ಬೆಳಗಾವಿಯ ಪ್ರಥಮೇಶ ಚಿಕ್ಕು, ಮಡಿಕೇರಿಯ ದಿಲಶನ್, ನೆವಿಲ್ ಆಟಗಾರರನ್ನು ಒಳಗೊಂಡ ತಂಡವು ಪ್ರಶಸ್ತಿಯ ಜೊತೆ (AED-10999) 2,55,836 ರೂಪಾಯಿಯನ್ನು ಬಹುಮಾನವಾಗಿ ಪಡೆಯಿತು.
ಬು ಅಬ್ದುಲ್ಲಾ ಸಮೂಹದ ಅಧ್ಯಕ್ಷರಾದ ಶ್ರೀಯುತ ಬು ಅಬ್ದುಲ್ಲಾ ಹಾಗೂ ಫಾರ್ಚ್ಯೂನ್ ಸಮೂಹದ ಮಾಲೀಕರಾದ ಶ್ರೀಯುತ ಪ್ರವೀಣ ಶೆಟ್ಟಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಬಹುಮಾನ ವಿತರಿಸಿದರು. ಇನ್ನೂ ಅನೇಕ ಸ್ಥಳೀಯ ಅತಿಥಿ ಗಣ್ಯರು ಉಪಸ್ಥಿತರಿದ್ದರು.
ಪಂದ್ಯಾಕೂಟದ ಶಿಸ್ತು ಸಂಯೋಜನೆಯ ಬಗ್ಗೆ ಗಲ್ಫ್ ಕರ್ನಾಟಕ ತಂಡದ ಬಳಗಕ್ಕೆ ಸಾರ್ವತ್ರಿಕವಾಗಿ ಭಾರೀ ಪ್ರಶಂಸೆಗಳು ಹರಿದುಬಂದಿತ್ತು.
ತೀವ್ರ ಪೈಪೋಟಿಯಲ್ಲಿ ಸಾಗಿದ ಈ ಪಂದ್ಯ ಭಾರಿ ಜನಮನ್ನಣೆ ಗಳಿಸಿತು.