ವಿಜಯಪುರದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ,ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದ ಕಾರ್ಕಳ ತಾಲೂಕು ಬೈಲೂರಿನ ಸುಜಿತ್ ಮತ್ತು ಜಸೀರ ಇವರನ್ನು ರಾಜಕೀಯ ನಾಯಕರ ಒತ್ತಡಕ್ಕೆ ಕಟ್ಟುಬಿದ್ದು ಉಡುಪಿ ಜಿಲ್ಲಾಧಿಕಾರಿಗಳು ರಾಜ್ಯ ತಂಡದಿಂದ ಹೊರಕ್ಕೆ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ,ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ವತಿಯಿಂದ ಉಡುಪಿ ಅಜ್ಜರಕಾಡು ಹತಾತ್ಮರ ಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಮಾತಾಡಿದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಜಿಲ್ಲಾಧಿಕಾರಿಗಳ ದಲಿತ-ಅಲ್ಪ ಸಂಖ್ಯಾತ ವಿರೋಧಿ ನಡೆಯನ್ನು ಖಂಡಿಸಿದರು.ಪ್ರಭಾವಿ ರಾಜಕಾರಣಿಗಳ ತಾಳಕ್ಕೆ ಕುಣಿಯುವ ಇಂತಹ ಲಜ್ಜೆಗೆಟ್ಟ ಜಿಲ್ಲಾಧಿಕಾರಿ ಈ ಜಿಲ್ಲೆಯಿಂದ ತೊಲಗಬೇಕು ಎಂದರು.
ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು,ಜಿಲ್ಲಾ ಸಂಘಟನಾ ಸಂಚಾಲಕ ಶಾಮ್ ರಾಜ್ ಬಿರ್ತಿ,ಜನಪರ ಚಿಂತಕ ಪ್ರೊಫೇಸರ್ ಫಣಿರಾಜ್ ಮತ್ತು ಹುಸೇನ್ ಕೋಡಿಬೆಂಗ್ರೆ ಮಾತಾಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಸುರೇಶ್ ಹಕ್ಲಾಡಿ,ಅಣ್ಣಪ್ಪ ನಕ್ರೆ, ಶಾಮಸುಂದರ ತೆಕ್ಕಟ್ಟೆ,ರಾಜೇಂದ್ರನಾಥ್,ಮಂಜುನಾಥ ನಾಗೂರು,ರಾಜು ಬೆಟ್ಟಿನಮನೆ,ಶಿವರಾಜ್ ಬೈಂದೂರ್,ಮಂಜುನಾಥ ಬಾಳ್ಕುದ್ರು,ಬಾಸ್ಕರ ನಿಟ್ಟೂರು,ಹರಿಶ್ಚಂದ್ರ ಕೆಡಿ,ಶಿವಾನಂದ ಬ್ರಹ್ಮಾವರ ಮತ್ತು ಇತರರು ಉಪಸ್ಥಿತರಿದ್ದರು.