Header Ads Widget

 

ವಿಶ್ವ ಧ್ಯಾನ ದಿನಾಚರಣೆ” ಪ್ರಯುಕ್ತ ದಿ. 21.12. 24 ರಂದು ಸಂಜೆ 6:00ಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಮಣಿಪಾಲ ಶಾಖೆಯಲ್ಲಿ  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಖ್ಯ ಸಂಚಾಲಕರು, ಬಿ.ಕೆ.  ಸೌರಭ ಇವರು ರಾಜಯೋಗದ ಬಗ್ಗೆ ವಿವರವಾಗಿ ಟೀವಿ ಪರದೆಯ ಮೇಲೆ ಸ್ಲೖಡ್ಸ್ ಮೂಲಕ ಸಭಿಕರಿಗೆ ತಿಳಿಸಿಕೊಟ್ಟರು.

ಮುಖ್ಯ ಅತಿಥಿಯಾಗಿ ಶ್ರೀ ಪ್ರತೀಕ್ ಬಾಯಲ್, ಐಎಎಸ್., ಸಿಈಓ., ಜಿಲ್ಲಾ ಪಂಚಾಯತ್, ಉಡುಪಿ, ಇವರು ಆಗಮಿಸಿ, ತಮ್ಮಲ್ಲಿ ಅತಿ ಕಡಿಮೆ ಅವಧಿಯ ಧ್ಯಾನದ ಅಭ್ಯಾಸದ ಅನುಭವವನ್ನು ಹಂಚಿ ಕೊಳ್ಳುತ್ತಾ, ರಾಜಯೋಗ ಧ್ಯಾನದ ಬಗ್ಗೆ ತಿಳಿಸಿದರು ಹಾಗೂ ತಮ್ಮ ಕಚೇರಿಯ  ಕಾರ್ಯ ವ್ಯವಹಾರ ಗಳಲ್ಲಿ ಧ್ಯಾನದಿಂದ ಪಡೆಯಬಹುದಾದ ಲಾಭಗಳನ್ನು ವಿವರಿಸಿದರು. ಮನಸ್ಸನ್ನು ಸ್ವಚ್ಛಗೊಳಿಸಿ ಕೊಂಡು, ನಮ್ಮ ಪ್ರಾವೀಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿಕೊಟ್ಟರು.


ದೀಪವನ್ನು ಬೆಳಗಿಸುವ ಮೂಲಕ ಶುಭ ಆರಂಭವನ್ನು ಮಾಡಲಾಯಿತುನಂತರ  ಉಡುಪಿ ಐ ಎಂ ಎ ಪ್ರೆಸಿಡೆಂಟ್ ಡಾ. ರಾಜಲಕ್ಷ್ಮಿ ಇವರು ತಮ್ಮ ಭಾಷಣದಲ್ಲಿ ಧ್ಯಾನದ ಮಹತ್ವಿಕೆಯನ್ನು ತಿಳಿಸಿಕೊಟ್ಟರು. ಧ್ಯಾನದಿಂದ  ನಮ್ಮ ಮನಸ್ಸಿನ ಸ್ವಚ್ಛತೆಯನ್ನು ಮಾಡಿಕೊಳ್ಳುವುದರ ಮುಖಾಂತರ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದೆಂಬುದನ್ನು ತಿಳಿಸಿದರು.

ಸಭಿಕರೆಲ್ಲರಿಗೂ ರಾಜಯೋಗ ಧ್ಯಾನದ ಕಾಮೆಂಟರಿ ಮೂಲಕ ಧ್ಯಾನದ ಅನುಭೂತಿ ಮಾಡಿಸಲಾ ಯಿತು . ಅತಿಥಿಗಳಿಗೆ ಈಶ್ವರೀಯ ಉಡುಗೊರೆ ನೀಡಿ ಸತ್ಕರಿಸಲಾಯಿತು. ಆಮಂತ್ರಿತರಿಗೆ ಬ್ಲೆಸ್ಸಿಂಗ್ ಕಾರ್ಡ್, ಕಿರುಪುಸ್ತಕ  ಮುಂತಾದುವನ್ನು ನೀಡಿ, ಡಿಸೆಂಬರ್ 23 ರಿಂದ 25ರ ವರೆಗೆ ನಡೆಯುವ ರಾಜ ಯೋಗ ಶಿಬಿರಕ್ಕೆ ಆಹ್ವಾನಿಸಲಾಯಿತು. ಅನ್ನ ಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.