ಅರವಿಂದ್ ಎನ್ ಕಲಗುಜ್ಜಿ, ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪವಿಭಾಗ ಮತ್ತು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ರವರ ನೇತೃತ್ವದ ಸೆನ್ ಉಪನಿರೀಕ್ಷಕರಾದ ಪವನ್ ನಾಯಕ್, ಸೆನ್ ಪೊಲೀಸ್ ಠಾಣಾ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ಪ್ರವೀಣ್, ರಾಜೇಶ್ , ವೆಂಕಟೇಶ, ದಿಕ್ಷೀತ್ , ಮಾಯಪ್ಪ, ಚರಣ್‌ರಾಜ್ ರವರನ್ನೊಳಗೊಂಡ ತಂಡ, ಕಾರ್ಕಳ ತಾಲೂಕು ನೀರೆ ಗ್ರಾಮದ ನೀರೆಹೆದ್ದಾರಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾರು ಮತ್ತು ಮೋಟಾರು ಸೈಕಲ್ ನಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ MDMA ಪೌಡರ್‌ನ್ನು ಮಾರಾಟ ಮಾಡಲು ಹೊಂದಿದ್ದ ಆರೋಪಿಗಳಾದ
1. ಪ್ರೇಮನಾಥ @ ಪ್ರೇಮ್ @ ರೇವುನಾಥ(23), ಕುರ್ಕಾಲು ಗ್ರಾಮ, ಕಾಪು ತಾಲೂಕು.
2. ಶೈಲೇಶ ಶೆಟ್ಟಿ ( 24), ಪೆರ್ಡೂರು, ಉಡುಪಿ.
3. ಪ್ರಜ್ವಲ್(28 ), ಬೊಮ್ಮರಬೆಟ್ಟು, ಕಾಪು.
4. ರತನ್ (27), ಬೊಮ್ಮರಬೆಟ್ಟು, ಉಡುಪಿ ರವರನ್ನು ದಸ್ತಗಿರಿಗೊಳಿಸಿ ಅವರಿಂದ 1) ಗಾಂಜಾ- 1 ಕೆ.ಜಿ, 112 ಗ್ರಾಂ ತೂಕ, ಮೌಲ್ಯ ರೂ, 87,500/-,
2) MDMA -37 ಗ್ರಾಂ 27 ಮಿಲಿ ಗ್ರಾಂ ತೂಕ, ಮೌಲ್ಯ ರೂ, 2,00,000/-,
3) KA20MA0160ನೇ ಕಾರು- ಮೌಲ್ಯ ರೂ, 4,00,000/-,
4) KA20ER7629 ನೇ ನಂಬ್ರದ Aprilia ಕಂಪೆನಿ ಮೋಟಾರು ಸೈಕಲ್-1, ಮೌಲ್ಯ ರೂ, 50,000/-,
5) ನಗದು ರೂ, 7,130/-
6) 5 ಮೊಬೈಲ್ ಪೋನ್. ಅಂದಾಜು ಮೌಲ್ಯ ರೂ. 41,000/-. ಸ್ವಾಧೀನ ಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ, 7,86,330/- ವಶಪಡಿಸಿಕೊಂಡು ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 91/2024 ಕಲಂ: 22(b), 8(c), 20 (b) (ii), (B) NDPS Act 1985 ರಂತೆ ಪ್ರಕರಣ ದಾಖಲಾಗಿರುತ್ತದೆ.