Header Ads Widget

ಮಾದಕ ವಸ್ತು ಎಂ.ಡಿ.ಎಂ.ಎ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಪ್ರಭು ಡಿ ಟಿ , ಪೊಲೀಸ್‌ ಉಪಾಧೀಕ್ಷಕರು,ಉಡುಪಿ ಉಪವಿಭಾಗ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು (ಪ್ರಭಾರ) ರಾಮಚಂದ್ರನಾಯಕ್, ಉಡುಪಿ ನಗರ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಪುನೀತ್‌ ಕುಮಾರ್‌ ಬಿ, ಸುರೇಶ್.ಕೆ, ಅಬ್ದುಲ್ ಬಶೀರ್, ಹೇಮಂತ, ಆನಂದ, ಶಿವಕುಮಾರ್, ಸೆನ್ ಅಪರಾಧ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್ , ಪ್ರವೀಣ್, ರಾಘವೇಂದ್ರ, ಮಾಯಪ್ಪ, ಪ್ರಶಾಂತ್ ರವರನ್ನೊಳಗೊಂಡ ತಂಡವು ಉಡುಪಿ ತಾಲ್ಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್‌ ಬಳಿ ಕಾರಿನಲ್ಲಿ ನಿಷೇದಿತ ಮಾದಕ ವಸ್ತು MDMA ಪೌಡರನ್ನು ಮಾರಾಟ ಮಾಡಲು ಹೊಂದಿದ್ದ ಆರೋಪಿಗಳಾದ 

1)ಅಕ್ಬರ್ ಮುಹಮ್ಮದ್ ಬ್ಯಾರಿ (32), ಕೋಟೆ ಗ್ರಾಮ, ಕಟಪಾಡಿ , ಕಾಪು.

2) ಎನ್ ಎಂ ಮಹಮ್ಮದ್ ಮುಕ್ದುಮ್ ಅಲಿ(28), ಉಚ್ಚಿಲ ಬಡಾ ಕಾಪುರವರನ್ನು ದಸ್ತಗಿರಿಗೊಳಿಸಿ ಅವರಿಂದ MDMA 69 ಗ್ರಾಂ 127 ಮಿಲಿ ಗ್ರಾಂ , ಮೊಬೈಲ್ ಪೋನ್-6, ನಗದು ರೂ, 1100/-, ಕಾರು-1, ಲೆನೆವೋ ಲ್ಯಾಪಟಾಪ್-1 ಮತ್ತು ಇತರೇ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಅಂದಾಜು ಮೌಲ್ಯ 20,11,900/- ಗಳಷ್ಟಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 233/2024 ಕಲಂ: 22(c) NDPS Act 1985 ರಂತೆ ಪ್ರಕರಣ ದಾಖಲಾಗಿರುತ್ತದೆ.