ಡಿಸೆಂಬರ್ 8. ರಂದು ಬೆಳಗಾವಿ ಯಾ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ಸಭಾ ಭವನದಲ್ಲಿ ನಡೆದ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ ಇದರ ರಾಜ್ಯ ಮಟ್ಟದ ಸಮಾವೇಶದಲ್ಲಿ ಬ್ರಹ್ಮಾವರ ಜಯಂಟ್ಸ್ ಸುಮಾರು 12 ಪ್ರಶಸ್ತಿಗಳನ್ನು ಮತ್ತು ಒಂದು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಗಳಿಸಿಕೊಂಡಿದೆ. ರಾಜ್ಯಮಟ್ಟದಲ್ಲಿ ಅತ್ಯುತ್ತಮ ಸಂಘಟನೆಯಾಗಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಅತ್ಯುತ್ತಮ ಅಧ್ಯಕ್ಷರಾಗಿ ಸುಂಡರ್ ಪೂಜಾರಿ ಮೂಡುಕುಕ್ಕುಡೆ ದ್ವಿತೀಯ ಸ್ಥಾನ ಮತ್ತು ಅತ್ಯುತ್ತಮ ಫೆಡ್ರೇಶನ್ ಮಾಜಿ ಅಧ್ಯಕ್ಷರಾಗಿ ಮಧುಸೂದನ್ ಹೇರೂರು ದ್ವಿತೀಯ ಸ್ಥಾನ ಪಡೆದುಕೊಂಡರು.
ಸಮ್ಮೇಳನದಲ್ಲಿ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಮಿಲ್ಟನ್ ಒಲಿವೆರ ಮತ್ತು ಗಂಗಾಧರ ಶೆಟ್ಟಿ ಬಾರ್ಕೂರು ಭಾಗವಹಿಸಿದ್ದರು.