Header Ads Widget

ಕೊಡವೂರು ಬ್ರಾಹ್ಮಣ ಮಹಾಸಭಾ ದಿನದರ್ಶಿಕೆ ಬಿಡುಗಡೆ :

ಕೊಡವೂರು ಬ್ರಾಹ್ಮಣ ಮಹಾ ಸಭಾದ ವತಿಯಿಂದ  ಹೊಸ ವರುಷ 2025 ನೇ ಸಾಲಿನ ದಿನದರ್ಶಿಕೆ ಯನ್ನು  ಕಡಿಯಾಳಿ ದೇವಸ್ಥಾನದ ಅಧ್ಯಕ್ಷರಾದ ವಿಜಯರಾಘವ ರಾವ್  ಬಿಡುಗಡೆಗೊಳಿಸಿ  ದಿನ ದರ್ಶಿಕೆಯಲ್ಲಿ ಮುದ್ರಿತಗೊಂಡಿರುವ  ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿ ಸಿದರು.  

ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿ, ಸಮರ್ಥ್ ಸಂತೋಷ ಸಾಮಗ ಪ್ರಾರ್ಥಿಸಿ ದರು. ಗೌರವಾಧ್ಯಕ್ಷ ನಾರಾಯಣ ಬಲ್ಲಾಳ್ , ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ದಿನದರ್ಶಿಕೆ ವಿನ್ಯಾಸ ಗೊಳಿಸಿದ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಚಂದ್ರಶೇಖರ್ ರಾವ್ ವಂದಿಸಿ ದರು.ರಾಜ ಶ್ರೀ ಪ್ರಸನ್ನ ನಿರೂಪಿಸಿದರು.