Header Ads Widget

ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ರವರಿಗೆ "ಕರ್ನಾಟಕ ಕಲಾಚಾರ್ಯ" ಪ್ರಶಸ್ತಿ


 ಉಡುಪಿ;  ಬೆಂಗಳೂರಿನ ಗಾಯನ ಸಮಾಜವು ಇತ್ತೀಚೆಗೆ ನಡೆದ 54 ನೇ ಸಂಗೀತ ಸಮ್ಮೇಳನದಲ್ಲಿ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸೇವೆ ಮತ್ತು ಸಾಧನೆಗಾಗಿ ಉಡುಪಿಯ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ರವರಿಗೆ "ಕರ್ನಾಟಕ ಕಲಾಚಾರ್ಯ" ಪ್ರಶಸ್ತಿ ಮತ್ತು ಐವತ್ತು ಸಾವಿರ ನಗದು ನೀಡಿ ಸನ್ಮಾನಿಸಲಾಯಿತು. 


ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ಜೀಯರ್ ರವರು ಪ್ರಶಸ್ತಿ ಪ್ರದಾನ ಮಾಡಿದರು. ಗಾಯನ ಸಮಾಜದ ಅಧ್ಯಕ್ಷರಾದ ಎಮ್.ಆರ್.ವಿ ಪ್ರಸಾದ್ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಮಧೂರು ಬಾಲಸುಬ್ರಹ್ಮಣ್ಯಂ ರವರು ಸಂಗೀತ ಕಛೇರಿಯನ್ನು ಏರ್ಪಡಿಸಲಾಗಿತ್ತು.