ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ದೊಡ್ಡಣಗುಡ್ಡೆಯಲ್ಲಿ ನಡೆದಿದೆ.
ದೊಡ್ಡಣಗುಡ್ಡೆಯ ಪೋಸ್ಟಲ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ಲಕ್ಷ್ಮವ್ವ ಕುಮಾರ ಮಾಳವತ್ತರ (30) ಅವರು ತನ್ನ ಮೂವರು ಮಕ್ಕಳಾದ ಅಪೂರ್ವಾ (7), ಶ್ರೇಯಾ (5) ಹಾಗೂ ಮನೋಜ್ (2) ಜತೆಗೆ ಡಿ.4ರಿಂದ ನಾಪತ್ತೆಯಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸಲು ಕೋರಲಾಗಿದೆ.