ಉಡುಪಿ: ನಾಟ್ಯಶ್ರೀ ಭರತನಾಟ್ಯ ಕಲಾ ಶಾಲೆ ಬೆಂಗಳೂರು ಇದರ ಗುರು ಸುಮಾ ನಾಗೇಶ್ ರವರ ಶಿಷ್ಯವೃಂದದವರಿಂದ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ದಂದು ಭರತನಾಟ್ಯ ಕಾರ್ಯಕ್ರಮ ನಡೆಯಿತು.
ವಿದುಷಿ ಮಾಧುರಿ ಅಚಲ್, ಉಮಾ ಮಹೇಶ್ವರಿ, ವಿದ್ವಾನ್ ಈಶ್ವರ್ ಐಯ್ಯರ್, ಕು. ಮನಸ್ವಿನಿ ಎಸ್. , ಕು. ಮೇಘನ ಡಿ., ಕು. ಶ್ರೇಯಾ ಭಟ್, ಕು. ಶ್ರಾವ್ಯಾ ಭಟ್, ಸೌಜನ್ಯ ಎಸ್. ಆರ್ ತಮ್ಮ ಅಮೋಘ ಅಭಿನಯದ ಭರತ ನೃತ್ಯದಿಂದ ಪೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.