Header Ads Widget

ಎನ್.ಸಿ.ಸಿ ಕೆಡೆಟ್‌ಗಳಿಗೆ ವಿವಿಧ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮ


ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವು ಉದ್ಯಮಶೀಲತೆ ಮತ್ತು ಸ್ಟಾರ್ಟಪ್ ಕೌಶಲ್ಯಗಳನ್ನು ವೃದ್ಧಿಸಲು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಎನ್.ಸಿ.ಸಿ ಎಕ್ಸ್ಚೇಂಜ್ ಆಫ್ ಪಾರ್ಟಿಸಿಪೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮಣಿಪಾಲ್ ಕೌಶಲ್ಯಾಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಆಯ್ದ ಎನ್.ಸಿ.ಸಿ ಕೆಡೆಟ್‌ಗಳಿಗೆ ವಿವಿಧ ಸಾಫ್ಟ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮವು ಇಂದು ನಗರದ ಮಣಿಪಾಲದ ಮಣಿಪಾಲ್ ಇನ್ಸಿ÷್ಟಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಬ್ರಿಗೇಡಿಯರ್ ಹಾಗೂ ಎಂ.ಎಸ್.ಡಿ.ಸಿ ಚೇರ್‌ಮ್ಯಾನ್ ಸುರ್ಜಿತ್ ಸಿಂಗ್ ಪೋಬ್ಲಾ ಮಾತನಾಡಿ, ಎನ್.ಸಿ.ಸಿ ವಿದ್ಯಾರ್ಥಿಗಳು ಸಕ್ರೀಯವಾಗಿ ಎನ್.ಸಿ.ಸಿ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದರ ಉದ್ದೇಶ ಹಾಗೂ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಎನ್.ಸಿ.ಸಿ ಕೆಡೆಟ್‌ಗಳಿಗೆ ಮಾನವೀಯ ಮೌಲ್ಯ ಬೆಳೆಸಲು, ಶಿಸ್ತು ಮತ್ತು ಧೈರ್ಯವನ್ನು ರೂಪಿಸುತ್ತದೆ. ಇಲ್ಲಿ ಕಲಿತಂತಹ ವಿಷಯ ಹಾಗೂ ಧೈರ್ಯ ತಮ್ಮ ಮುಂದಿನ ಜೀವನವನ್ನು ಯಶಸ್ವಿಗೊಳಿಸುವುದರೊಂದಿಗೆ ಸಮಾಜದಲ್ಲಿ ಗೌರವವನ್ನು ಸಹ ಹೆಚ್ಚಿಸುತ್ತದೆ.

ಇದರ ಜೊತೆಗೆ ದೇಶದ ಆಂತರಿಕ ಭದ್ರತೆಯಲ್ಲಿ ಪಾಲ್ಗೊಳ್ಳಲು ಸಹ ಸಹಕಾರಿಯಾಗುತ್ತದೆ ಎಂದರು.

ದೇಶದ ಯುವಜನತೆ ತಮ್ಮ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡದೇ ಉತ್ತಮ ಶಿಕ್ಷಣವಂತರಾಗಬೇಕು. ಶಿಕ್ಷಣ ಹೊಂದುವಾಗ ಪಠ್ಯ ಚಟುವಟಿಕೆಗಳ ಜೊತೆಯಲ್ಲಿ ಇತರೆ ಚಟುವಟಿಕೆಗಳ ಬಗ್ಗೆ ಆಸಕ್ತಿ ಹೊಂದಬೇಕು. ಅಲ್ಲದೇ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಪಡೆದಲ್ಲಿ ಅವು ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ ಎಂದರು.

ಡಿಸೆಂಬರ್ 30 ರ ವರೆಗೆ ನಗರದ ಮಣಿಪಾಲ್ ಇನ್ಸಿ÷್ಟಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಎನ್.ಸಿ.ಸಿ ಕೆಡೆಟ್‌ಗಳು ಸಮಯವನ್ನು ವ್ಯರ್ಥಮಾಡದೇ, ಶಿಬಿರದಲ್ಲಿ ಜರುಗುವ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಕ್ರಮ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಮನುಷ್ಯ ಹುಟ್ಟಿನಿಂದ ಕೊನೆಯವರೆಗೂ ಕಲಿಯುತ್ತಲೇ ಇರಬೇಕು. ಕಲಿಕೆಗೆ ಕೊನೆ ಇರುವುದಿಲ್ಲ. ವಿಶ್ವದಲ್ಲಿ ಪ್ರತಿದಿನವೂ ಹೊಸ ಹೊಸ ವಿಷಯಗಳನ್ನು ಕಲಿಯಲು ಅವಕಾಶವಿದೆ. ಕಲಿಕೆಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಡಾ. ಅಂಜಯ್ ಡಿ, ಡಾ. ಮೊಹಮ್ಮದ್ ಝುಬೇರ್, ಡಾ. ಸುಚೇತಾ ಕೊಲೆಕಾರ್, ಕರ್ನಾಟಕ ಮತ್ತು ಗೋವಾದ ಎನ್‌ಸಿ.ಸಿ ಕೆಡಿಟ್ಸ್ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬ್ರಿಗೇಡಿಯರ್ ರಾಹುಲ್ ಚೌಹಾಣ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಎನ್.ಸಿ.ಸಿ ಕೆಡೆಟ್‌ಗಳಿಗೆ ಎನ್.ಸಿ.ಸಿ ಯಲ್ಲಿ ಉತ್ತಮ ತರಬೇತಿ ನೀಡುವುದರ ಜೊತೆಗೆ ಸ್ಟಾರ್ಟಪ್ ಮತ್ತು ಉದ್ಯಮಶೀಲತೆ ಕೌಶಲ್ಯಗಳನ್ನು ಹೆಚ್ಚಿಸುವುದು ಎನ್.ಸಿ.ಸಿ ಕಟುಬದ್ಧತೆಯ ಪ್ರಮುಖ ಧ್ಯೇಯವಾಗಿದೆ ಎಂದರು.

ಡಿಸೆಂಬರ್ 21 ರಿಂದ 30 ರ ವರೆಗೆ 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, ಮಣಿಪಾಲ್ ಇನ್ಸಿ÷್ಟಟ್ಯೂಟ್ ಆಪ್ ಟೆಕ್ನಾಲಜಿ ಮಣಿಪಾಲದಲ್ಲಿ 10 ದಿನಗಳ ಶಿಬಿರ ನಡೆಯಲಿದ್ದು, 441 ಎನ್.ಸಿ.ಸಿ ಕೆಡೆಟ್ಸ್ಗಳ ಸಂಯೋಜಿತ ಶಿಬಿರವನ್ನು ಆಯೋಜಿಸಲಾಗುವುದು.

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಶೀಲತೆ ಕ್ರಮಚಟುವಟಿಕೆಗಳ ಬಗ್ಗೆ ಆಯ್ಕೆಯಾದ 80 ಕೆಡೆಟ್ಸ್ಗಳಿಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷತಜ್ಞರು ಮತ್ತು ಗಣ್ಯವ್ಯಕ್ತಿಗಳಿಂದ ಉಪನ್ಯಾಸಗಳು, ಪ್ರದರ್ಶನಗಳು ಮತ್ತು ಸಂವಾದಗಳು ನಡೆಯಲಿವೆ.