ನೀಲಾವರ ಶ್ರೀಮಹಿಷರ್ಮನೀ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವದ ಅಂಗವಾಗಿ ಶನಿವಾರ ಶ್ರೀಮಹಿಷರ್ಮನೀ ದೇವರಿಗೆ ವಿಶೇಷ ಪೂಜೆ, ನಂತರ ರಥೋತ್ಸವ ನಡೆಯಿತು.
ದೇವಳದಲ್ಲಿ ಶುಕ್ರವಾರ ರಾತ್ರಿ ದೀಪೋತ್ಸವ ಮತ್ತು ರಂಗಪೂಜೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಕಾರ್ಯ ನಿರ್ವಹಣಾಕಾರಿ ಅನುಷಾ, ದೇವಳದ ಅರ್ಚಕರುಗಳಾದ ಚಂದ್ರಶೇಖರ ಅಡಿಗ, ರಾಘವೇಂದ್ರ ಅಡಿಗ, ಕೃಷ್ಣ ಅಡಿಗ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುರ್ ಕುಮಾರ್ ಶೆಟ್ಟಿ, ಅನೂಪ್ ಕುಮಾರ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ತಮ್ಮಯ್ಯ ನಾಯ್ಕ, ಹೇಮಾ ವಿ. ಬಾಸ್ರಿ, ಜಯಂತಿ ಮೆಂಡನ್, ರುದ್ರದೇವಾಡಿಗ ಎನ್., ದೇವಳದ ಅರ್ಚಕ ವೃಂದ, ದೇವಳದ ಉಪಾದಿವಂತರು, ಸಿಬ್ಬಂದಿ ವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.