Header Ads Widget

AATA BEE 2024 - ಅಂತರರಾಷ್ಟ್ರೀಯ ಕ್ವಿಜ್ ಸ್ಪರ್ಧೆಯ ಫಲಿತಾಂಶ

ತುಳು ಭಾಷೆಯನ್ನು ಉಳಿಸುವುದು, ಬೆಳೆಸುವುದು ಮತ್ತು ಉತ್ತರ ಅಮೇರಿಕದೆಲ್ಲೆಡೆ ಪಸರಿಸುವ ಮೂಲ ಉದ್ದೇಶದಿಂದ ಆರಂಭವಾದ ಆಲ್ ಅಮೇರಿಕ ತುಳು ಅಸೋಸಿಯೇಷನ್ "ಆಟ" ಕಳೆದ 4 ವರ್ಷ ಗಳಿಂದ ಹಲವಾರು ಕಾರ್ಯಕ್ರಮವನ್ನು ಕೈಗೊಂಡಿದ್ದು ಮಕ್ಕಳನ್ನೂ ಆಟದ ವೇದಿಕೆಗೆ ತರಲು ಅತ್ಯುತ್ತಮ  ಕಾರ್ಯಕ್ರಮಗಳನ್ನು ಮಾಡುತ್ತಿದೆ. 

ನಿಮಗೆಲ್ಲ ತಿಳಿದಂತೆ ಇಂದಿನ ಯುವಕರೇ ಮುಂದಿನ ನಾಯಕರು, ಅವರಿಗೆ ನಮ್ಮ ಸಂಸ್ಕೃತಿಯ ಬಗ್ಯೆ ಬಾಲ್ಯದಲ್ಲಿಯೇ ತಿಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಅಂತರ್ಜಾಲದ ಆಕರ್ಷಣೆಗೆ ಒಳಗಾಗಿರುವ ನಮ್ಮ ಯುವ ಜನಾಂಗಕ್ಕೆ, ಹೊರಗಿನ ಪ್ರಪಂಚದ ಸಂಸ್ಕೃತಿಯ ಪರಿಚಯ ಕಡಿಮೆ ಆಗುತ್ತಾ ಇದೆ ಎಂದು ದೂರುವುದರ ಬದಲಾಗಿ ಇಂಟರ್ನೆಟ್ ನ ಉಪಯೋಗದಿಂದ ಉತ್ತಮ ಕಾರ್ಯಕ್ರಮವನ್ನು ಹೇಗೆ ಮಾಡಬಹುದು ಎಂಬುದಕ್ಕೆ “AATA BEE 2024” -ಅಂತರಾಷ್ಟ್ರೀಯ ಕ್ವಿಜ್ ಕಾರ್ಯಕ್ರಮ ಸಾಕ್ಷಿ.


 ಈ ಕಾರ್ಯಕ್ರಮ ಉತ್ತರ ಅಮೇರಿಕ ಖಂಡದಲ್ಲಿ ವಾಸಿಸುವ ತುಳುವ ಮಕ್ಕಳನ್ನು ಒಟ್ಟುಗೂಡಿ ಸುವುದರ ಜೊತೆಗೆ, ಅವರಿಗೆ ನಮ್ಮ ತುಳು ಭಾಷೆಯನ್ನು ಪರಿಚಯಿಸುವ ಮತ್ತೊಂದು ಮೈಲಿಗಲ್ಲು. ಇದು ವಿಮರ್ಶಾತ್ಮಕ ಚಿಂತನೆ, ವಿಜ್ಞಾನ, ಗಣಿತ, ಇತಿಹಾಸ, ಕ್ರೀಡೆ, ಸಾಮಾನ್ಯ ಜ್ಞಾನ ಮತ್ತು ಹೆಚ್ಚಿನ ವಿಚಾರಗಳಿಗೆ ಸಂಭಂದಿಸಿದ ಪರೀಕ್ಷೆ.


AATA BEE ಅಂತರಾಷ್ಟ್ರೀಯ ಯುವ ರಸಪ್ರಶ್ನೆ - 2023 ರ ಮೊದಲ ಋತುವಿನ ಸ್ಪರ್ಧೆಯನ್ನು ಕಳೆದ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ನಡೆಸಲಾಯಿತು. ಕಳೆದ ವರ್ಷದ ಮಾದರಿಯಂತೆ ಆಟದ ಯುವ ಪ್ರತಿಭೆಗಳಿಗೋಸ್ಕರ ಈ ವರ್ಷ ಕೂಡ ಡಿಸೆಂಬರ್ ನಲ್ಲಿ “AATA BEE-2024 ಅಂತರಾಷ್ಟ್ರೀಯ ರಸಪ್ರಶ್ನೆ” ಸ್ಪರ್ಧೆಯನ್ನು ಪ್ರೌಢ ಶಾಲೆ, ಮಾಧ್ಯಮಿಕ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆ ಎಂಬ ಮೂರು ವಿಭಾಗಗಳಲ್ಲಿ ನಡೆಸಲಾದ ಸ್ಪರ್ಧೆಗಳಲ್ಲಿ ಅಮೇರಿಕಾ ಹಾಗು ಕೆನಡಾದ ೮೦ ಕ್ಕೂ ಹೆಚ್ಚು ಶಾಲೆಗಳ ಮಕ್ಕಳು ಭಾಗವಹಿಸಿದರು.


ಹೈಸ್ಕೂಲ್ ಮಟ್ಟದಲ್ಲಿ ಅಮೆರಿಕದ ಟೆಕ್ಸಾಸ್ ನ ಫ್ಲವರ್ ಮೌಂಡ್ ಹೈಸ್ಕೂಲ್‌ನ ರಾಘವ ಶೆಟ್ಟಿ  ವಿಜೇತ ರಾಗಿದ್ದು ಟ್ರೋಫಿ ಮತ್ತು $1000 ನಗದು ಪ್ರಶಸ್ತಿಯನ್ನು ಪಡೆದಿದ್ದಾರೆ. ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್‌ನ ಸಿಲಿಕಾನ್ ವ್ಯಾಲಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ರಿಯಾನ್ ಶೆಟ್ಟಿ ಎರಡನೇ ಶ್ರೇಯಾಂಕ ವನ್ನು ಮತ್ತು ಮೋರಿಸ್ವಿಲ್ಲೆ ನಾರ್ತ್ ಕೆರೊಲಿನದ ಪ್ಯಾಂಥರ್ ಕ್ರೀಕ್ ಹೈ ಸ್ಕೂಲ್ ನ ಕ್ಲೇರ್ ಡಿಸೋಜಾ ಮೂರನೇ ಶ್ರೇಯಾಂಕವನ್ನು ಪಡೆದಿರುವರು.  ನಿಖಿಲ್ ಶೇರಿಗಾರ್, ಅನಿಕೇತ್ ಶೇರಿಗಾರ್, ಆಧ್ಯಾ ಆನಂದ್, ನೀಶ್ಮಾ ಶೆಟ್ಟಿ, ಅರ್ವಿಲ್ ಮಥಿಯಾಸ್, ತನಿಶ್ ಶೆಟ್ಟಿ, ಸಮ್ಯಕ್ ಆಚಾರ್ಯ ಮತ್ತು ಸಾಹಸಿ ಉಡುಪ ಅವರು ಹತ್ತು ಅಗ್ರ ಶ್ರೇಣಿಯ ಇತರ ವಿದ್ಯಾರ್ಥಿಗಳು.


ಮಾಧ್ಯಮಿಕ ಶಾಲೆಯ ವಿಭಾಗದಲ್ಲಿ ಹಲವಾರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಅಮೇರಿಕಾದ ಮ್ಯಾಸ ಚೂಸೆಟ್ಸ್ನ ಗ್ರಾಪ್ಟನ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಹೃಧಾನ್ ಗೌತಮ್ ಪ್ರಥಮ ಸ್ಥಾನವನ್ನು ಪಡೆದು ಟ್ರೋಫಿ ಹಾಗೂ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು. ನಾರ್ತ್  ಕರೋಲಿನಾ ಕ್ಯಾರಿಯ ಕಾರ್ನೇಜ್ ಮ್ಯಾಗ್ನೆಟ್ ಮಿಡ್ಲ್  ಸ್ಕೂಲ್ ನ ಅರ್ಣವ್ ಶೆಟ್ಟಿ ಎರಡನೇ ಸ್ಥಾನ ಮತ್ತು ಅಪೆಕ್ಸ್ ಮಿಲ್ಸ್  ಪಾರ್ಕ್  ಮಿಡ್ಲ್  ಸ್ಕೂಲ್ ನ ಆತ್ಮನ್ ಕೂರ್ಸೆ ಮೂರನೇ ಸ್ಥಾನವನ್ನು ಅನುಕ್ರಮವಾಗಿ ಪಡೆ ದಿರುವರು. ಉಳಿದ 10 ಅಗ್ರ ಶ್ರೇಯಾಂಕವನ್ನು ಪಡೆದವರು ಕ್ರಮವಾಗಿ ನಾಥನ್ ಡಿ'ಸೋಜಾ, ಅಂಜನಾ ಉಪಾಧ್ಯ, ಕಾರ್ತಿಕ್ ಪುತ್ತೂರು, ಪ್ರದ್ಯುಮ್ನ ಭಟ್, ಡೇಲಿನ್ ರೇಗೊ, ಹೃಧಾನ್ ಶೆಟ್ಟಿ ಮತ್ತು ಸಂವಿತ್ ಶಾನಭಾಗ್. 


ಅಮೇರಿಕಾದ  ಅಯೋವಾ  ರಾಜ್ಯದ ಬೆಟೆಂಡೊರ್ಫ಼್ ನಗರದ ಹೋಪೆವೆಲ್ ಎಲಿಮೆಂಟರಿ ಸ್ಕೂಲ್ ನ ಅಕ್ಷಜ  ಚಿದಾನಂದ ಎಲಿಮೆಂಟರಿ ಶಾಲೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿ. ನ್ಯೂಜೆರ್ಸಿಯಾ   ಬಡ್ದ್ ಲೇಕ್ ಚೆಸ್ಟರ್ ಎಂ. ಸ್ಟೀಫನ್ಸ್ ಎಲಿಮೆಂಟರಿ ಸ್ಕೂಲ್ ನ ಹೀರಲ್ ಮೂಲ್ಯ ಎರಡನೇ ಸ್ಥಾನ ಮತ್ತು ಕ್ಯಾಲಿಫೋರ್ನಿಯಾ ಓಕ್ವಿಲ್ಲೇ ಪೋಸ್ಟ್ಸ ಕ್ವಾರ್ನರ್ಸ್ ಪಬ್ಲಿಕ್ ಸ್ಕೂಲ್ ನ ಅನರ್ಘ್ಯ ಅಭಿರಾಮ್ ಮೂರನೇ ಸ್ಥಾನವನ್ನು ಪಡೆದಿರುವರು. ನಂತರದ 10 ಅಗ್ರ ಶ್ರೇಯಾಂಕಿತ ವಿದ್ಯಾರ್ಥಿಗಳು ಆಧಿ ಬಂಗೇರ, ರಿಶಾನ್ ಶೆಟ್ಟಿ, ನಿರ್ವ್ಯ್ ಶೆಟ್ಟಿ, ಕವಿನ್ ಆಚಾರ್ಯ, ಇಶಾನ್ ಶೆಟ್ಟಿ, ಇನಿಕ ಆಚಾರ್ಯ, ಅನ್ಸಿಕಾ ಶೇರಿಗಾರ್ ಅನುಕ್ರಮವಾಗಿ. ಪ್ರಾಥಮಿಕ ಶಾಲೆಯ ಕ್ವಿಜ್ ವಿದ್ಯಾರ್ಥಿಗಳ ನಡುವೆ ಕಠಿಣ ಸ್ಪರ್ಧೆ ನಡೆದಿದ್ದು ಕೊನೆಯದಾಗಿ ಟೈಬ್ರೇಕರ್ ಸುತ್ತನ್ನು ನಡೆಸಿ ವಿಜೇತರನ್ನು ಘೋಷಿಸಲಾ ಯಿತು. 


ಯುವ ಜನಾಂಗಕ್ಕೆ ಪ್ರೋತ್ಸಾಹ ಹಾಗೂ ವಿದ್ಯಾರ್ಥಿವೇತನವನ್ನು ಕೊಡುವ ಸದುದ್ದೇಶದಿಂದ ಅಂತರರಾಷ್ಟ್ರೀಯ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸುವ ಮೂಲಕ AATA ಇತಿಹಾಸವನ್ನು ಸೃಷ್ಟಿಸುತ್ತಿದೆ ಎಂದು "ಆಟ"ದ ಅಧ್ಯಕ್ಷರಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಪ್ರದರ್ಶಿಸಲು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಧಾರಿಸಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದು ಹೇಳುತ್ತಾ ಮುಂದಿನ ವರ್ಷ ನಾರ್ತ್ ಕರೋಲಿನಾ ರಾಲೇ  ಯಲ್ಲಿ ನಡೆಯುವ "ಆಟ ಸಿರಿಪರ್ಬ- 2025" ಮಕ್ಕಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೇಳಿಕೊಂಡರು.


 ಇಂದಿನ ರಸಪ್ರಶ್ನೆಯ ನಿಯಮಗಳನ್ನು ತಿಳಿಸುವುದರ ಜೊತೆಗೆ ರಸಪ್ರಶ್ನೆ ಉದ್ದಕ್ಕೂ ಮಾರ್ಗದರ್ಶನ ನೀಡುತ್ತಾ  ಕ್ವಿಜ್ ಮಾಸ್ಟರ್ ಆಗಿ  ಆಟದ ಡೈರೆಕ್ಟರ್'ಗಳಾದ ವರ್ಜೀನಿಯದ ಡಾ. ರತ್ನಾಕರ ಶೇರಿಗಾರ್, ಕೆಂಟಕಿಯಾ ಡಾ. ರೋಷನ್ ಪಾಯಸ್, ನಾರ್ತ್ ಕ್ಯಾರೊಲಿನಾದ "ಆಟ"ದ ಜಂಟಿ ಕಾರ್ಯದರ್ಶಿ ಶ್ರೀಮತಿ ರಂಜನಿ ಅಸೈಗೋಳಿ, ಟೊರಾಂಟೊ ಕೆನಡಾದ ಎನರ್ಜಟಿಕ್ ಸದಸ್ಯೆ ಶ್ರೀಮತಿ ಸಿಂಧು ಕುಲಾಲ್ ಅವರು ಕಾರ್ಯನಿರ್ವಹಿಸಿದರು. 


ಆಟದ ಡೈರೆಕ್ಟರ್ ಶ್ರೀ ಪ್ರಸನ್ನ ಲಕ್ಷ್ಮಣ್, ಮ್ಯಾಸಚುಸೆಟ್ಸ್ ಮತ್ತು ಖಜಾಂಜಿ ಶ್ರೀ ಸಂತೋಷ್ ಶೆಟ್ಟಿ, ಅಟ್ಲಾಂಟಾ ಅವರು ಮಾಡರೇಟರ್ ಆಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಪ್ರಶಸ್ತಿ ಗೆದ್ದ ಹಾಗೆ, ಭಾಗವಹಿಸಿದ್ದಕ್ಕಾಗಿ ಎಲ್ಲಾ ಮಕ್ಕಳು ಮತ್ತು ಮಕ್ಕಳನ್ನು ಪ್ರೋತ್ಸಾಹಿಸಿದ ಅವರ ಪೋಷಕರಿಗೆ ಧನ್ಯವಾದಗಳನ್ನು ಶ್ರೀ ಸಂತೋಷ್ ಶೆಟ್ಟಿ ಅವರು ಅರ್ಪಿಸಿದರು.


‘ಆಟ’ ಸ್ಥಾಪಕ ಅಧ್ಯಕ್ಷ ಬೋಸ್ಟನ್‌ನ ಭಾಸ್ಕರ್ ಶೇರಿಗಾರ್, ಉಪಾಧ್ಯಕ್ಷ ಅಟ್ಲಾಂಟಾದ ಶಿರೀಶ್ ಶೆಟ್ಟಿ, ಉಪಾಧ್ಯಕ್ಷ ಟೊರೊಂಟೊ ಕೆನಡಾದ ಸುದರ್ಶನ್ ಶೆಟ್ಟಿ, ಜಂಟಿ ಖಜಾಂಚಿ ಸುದೀಪ್ ಹೆಬ್ಬಾರ್ ಅಟ್ಲಾಂಟಾ, ಆಡಳಿತ ಮಂಡಳಿ ಅಧ್ಯಕ್ಷ ಡಾ. ಮೋಹನ್‌ ಚಂದ್ರ  ಕೆ.ಪಿ. ಕ್ಯಾಲಿಫೋರ್ನಿಯಾ, ಎಲ್ಲಾ ನಿರ್ದೇಶಕರು, ಅಂಬಾಸಾಡೋರ್ಸ್ಗಳು ಮತ್ತು ಅಡ್ವೈಸರ್ ಗಳು ಅಗತ್ಯ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸಿದರು. 


ಆಲ್ ಅಮೇರಿಕ ತುಳು ಅಸೋಸಿಯೇಷನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು "AATA BEE ಅಂತರಾಷ್ಟ್ರೀಯ ರಸಪ್ರಶ್ನೆ" ಸ್ಪರ್ಧೆಯನ್ನು ಮುಂದಿನ ವರ್ಷಗಳಲ್ಲೂ ಡಿಸೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿದ್ದು ನಿಜವಾಗಲೂ ಶ್ಲಾಘನೀಯ.

ವರದಿ: ಪ್ರಶಾಂತ್ ಕುಮಾರ್ ಮಟ್ಟು , ಆಟ ನಿರ್ದೇಶಕರು, ಮಿಚಿಗನ್, USA