ಬನವಾಸಿ ಮಧುಕೇಶ್ವರ ದೇವಾಲಯದ ವಿಶಾಲ ಆವರಣ..
ಕ್ಲಿಕ್ಡ್: ಪ್ರೊ. ಸದಾಶಿವ ರಾವ್, ಉಡುಪಿ.
ಮಧುಕೇಶ್ವರ ದೇವಾಲಯವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಬನವಾಸಿಯಲ್ಲಿದೆ. ಇದು ಸಿರ್ಸಿ ಮತ್ತು ಸೊರಬ ಪಟ್ಟಣಗಳಿಂದ ಸುಮಾರು ೨೪ ಕಿಮೀ ದೂರದಲ್ಲಿದೆ.
ಸುಮಾರು ೧೫೦೦ ವರ್ಷದ ಹಿಂದೆ ಕದಂಬರು, ಚಾಲುಕ್ಯರು, ಹೊಯ್ಸಳರ ಕಾಲದಲ್ಲಿ ದೇವಾಲಯ ವನ್ನು ಕಟ್ಟಲಾಗಿದೆ. ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದ ನೆಂದು ನಂಬಿಕೆ.
ಪವಿತ್ರ ವರದಾ ನದಿಯು ದೇವಾಲಯದ ಎದುರಿಗೆ ಹರಿಯುತ್ತಿದೆ. ಶ್ರೀ ಮಧುಕೇಶ್ವರ ಇಲ್ಲಿನ ಆರಾಧ್ಯ ದೈವ. ದೇವಾಲಯವು ಕರ್ನಾಟಕದ ಏಳು ಮುಕ್ತಿ ಸ್ಥಳಗಳಲ್ಲೊಂದು ಎಂದು ಪ್ರಸಿದ್ಧವಾಗಿದೆ.