Header Ads Widget

ಇಂದಿರಾ ಶಿವರಾವ್ ಟ್ರಸ್ಟ್(ರಿ) ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್(ರಿ) ವತಿಯಿಂದ ಶಿಷ್ಯವೇತನ ವಿತರಣೆ

ಇತ್ತೀಚೆಗೆ ಬ್ರಾಹ್ಮಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 75 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು. ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಈ ಒಂದು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾರ್ಜನೆಯ ಖರ್ಚನ್ನು ಬರಿಸುವ ಮೂಲಕ ತೃಪ್ತಿ ಪಡಿಸ ಬಹುದು ಮತ್ತು ಇಂದಿರಾ ಶಿವರಾವ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಮಾಡುತ್ತಿರುವ ಕಾರ್ಯ ಅಭಿನಂದನಾರ್ಹ ಎಂದು ತಿಳಿಸಿದರು. ತದನಂತರ ಪರಮ ಪೂಜ್ಯಶ್ರೀಪಾದರ ಜೊತೆಗೆ ವೇದಿಕೆಯಲ್ಲಿದ್ದ ಟ್ರಸ್ಟಿನ ಕಾರ್ಯದರ್ಶಿ ಯು.ರಮೇಶ ರಾವ್ ಮತ್ತು ಟ್ರಸ್ಟಿ ಆಗಿರುವ ಶ್ರೀ ನಾಗರಾಜ ತಂತ್ರಿ ಮತ್ತು ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಶ್ರೀ ಚಂದ್ರಕಾಂತ್ ಕೆ ಎನ್ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದರು ಅದೇ ರೀತಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಪ್ರತಿ ವರ್ಷವೂ ಕೊಡಮಾಡು ತ್ತಿರುವಂತೆ ಈ ಬಾರಿಯೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 95 ಶೇಕಡಕ್ಕಿಂತ ಹೆಚ್ಚು ಅಂಕಗಳಿಸಿದ ಸಮಾಜದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಹಣದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದರ ಜೊತೆಗೆ ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ಕಿರು ಸಹಾಯ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳೂ ದಾನಿಗಳೂ ಹಾಗು ಪರಿಷತ್ ನ ಪೂರ್ವಾಧ್ಯಕ್ಷ ರಾಗಿದ್ದ ಶ್ರೀ ಕೆ. ಎಂ. ಉಡುಪ ಅವರು ನೆರವೇರಿಸಿಕೊಟ್ಟರು.

ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜ್ ಮತ್ತು ಉಡುಪಿಯ ಸುತ್ತಮುತ್ತಲಿನ ಹಲವಾರು ಶಾಲಾ-ಕಾಲೇಜಿನ ಒಟ್ಟು 64 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಇಂದಿರಾ ಶಿವರಾವ್ ಟ್ರಸ್ಟ್ ನಿಂದ ನೀಡಿದ್ದು ಕಳೆದ ಹಲವಾರು ವರ್ಷಗಳಿಂದ ಪ್ರತಿವರ್ಷವೂ ಕೂಡ ಈ ಕಾರ್ಯಕ್ರಮ ಮುಂದುವರಿಯುತ್ತಿರುವುದು ಬಹಳ ಹೆಮ್ಮೆಯ ವಿಷಯ. ಈ ಒಂದು ವಿದ್ಯಾರ್ಥಿ ವೇತನವನ್ನು ದಿವಂಗತ ಶಿವರಾವ್ ಮತ್ತು ಇಂದಿರಾರವರ ನೆನಪಿಗಾಗಿ ಟ್ರಸ್ಟಿನ ಅಧ್ಯಕ್ಷ ಯು ವಿ ರಾವ್ ರವರು ಹಾಗೂ ಎಲ್ಲ ಟ್ರಸ್ಟಿ ಗಳು ಸೇರಿ ಈ ಬಾರಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಮೂಲಕ ವಿತರಿಸಿದರು. ಶಿವರಾವ್ ರವರು ತಮ್ಮ ಜೀವಿತಾವಧಿಯಲ್ಲಿ ಆಸ್ತಿಯ ಬಹುಪಾಲು ಭಾಗವನ್ನು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ವಿನಿಯೋಗಿಸುತ್ತಿದ್ದರು. ಹಾಗಾಗಿ ಅವರ ಕಾಲಾನಂತರ ಈ ಉದ್ದೇಶಕ್ಕಾಗಿ ಒಂದು ಟ್ರಸ್ಟ್ ಪ್ರಾರಂಭಿಸಿ ಈ ಸೇವೆ ಮುಂದುವರಿಯುತ್ತ ಬಂದಿದೆ. ಕಾರ್ಯಕ್ರಮಕ್ಕೆ ಶಶಿಪ್ರಭಾ ಕಾರಂತ್ ಪ್ರಾರ್ಥನೆಯ ಮೂಲಕ ಶುಭ ಹಾರೈಸಿದರು. ಅಧ್ಯಕ್ಷ ಚಂದ್ರಕಾಂತ ಕೆ.ಎನ್ ಸ್ವಾಗತಿಸಿ ಪ್ರಧಾನಕಾರ್ಯದರ್ಶಿ ರಾಜೇಶ್ ಪಣಿಯಾಡಿ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಅಮಿತ ಕ್ರಮದಾರಿ, ಪದ್ಮಲತಾ ವಿಷ್ಣು ಹಾಗೂ ದಿವ್ಯಾ ಪಾಡಿಗಾರ್ ಮಕ್ಕಳ ಪಟ್ಟಿಯ ನಿರ್ವಹಣೆ ಮಾಡಿ ನಿಕಟ ಪೂರ್ವಾಧ್ಯಕ್ಷ ಚೈತನ್ಯ M.G. ಕಾರ್ಯಕ್ರಮ ನಿರೂಪಿಸಿದರು.