ಕೋಟ: ಕೋಟದ ಸುವಿಕಾ ಸಾಂಸ್ಕೃತಿಕ ಸಂಘಟನೆಯು ೨೦೨೫ ರ ಜನವರಿಯಲ್ಲಿ ನಡೆಯುವ ಕಾಲೇಜು ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಕ್ಕಾಗಿ ಉಡುಪಿ ಜಿಲ್ಲಾ ಪದವಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಕವನಗಳನ್ನು ಆಹ್ವಾನಿಸುತ್ತಿದೆ.
ಆಯ್ಕೆಯಾದ ಕವಿತೆಗಳನ್ನು ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚಿಸಲು ಅವಕಾಶವಿದ್ದು, ಸಂಘಟನೆ ಪ್ರಕಟಿಸಲಿರುವ ಕವನ ಸಂಕಲನದಲ್ಲಿ ಬಳಸಿಕೊಳ್ಳಲಾಗುವುದು. ಒಬ್ಬರು ತಮ್ಮ ಸ್ವರಚಿತ ಒಂದು ಕವಿತೆಯನ್ನು ಮಾತ್ರ ಕಳುಹಿಸಬಹುದಾಗಿದೆ.
ಕವಿತೆಗಳು ‘ಏ೪’ ಅಳತೆಯ ಹಾಳೆಯಲ್ಲಿ ಟೈಪ್ ಮಾಡಿದ್ದು, ತಮ್ಮ ಕಿರು ಪರಿಚಯ, ಅನುಕೂಲದ ಅಂಚೆ ವಿಳಾಸ, ವಾಟ್ಸಾಪ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ಅಳತೆಯ ಭಾವಚಿತ್ರದೊಂದಿಗೆ “ಸುಜಯೀಂದ್ರ ಹಂದೆ ಎಚ್., ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ, ಪಟೇಲರ ಮನೆ, ಕೋಟ ಅಂಚೆ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ-೫೭೬೨೨೧” ಇವರಿಗೆ ಸಾಮಾನ್ಯ ಅಂಚೆಯಲ್ಲಿ ಡಿಸೆಂಬರ್ ೨೦ ರ ಒಳಗಾಗಿ ಕಳುಹಿಸಿಕೊಡುವುದು.
ಹೆಚ್ಚಿನ ಮಾಹಿತಿಗೆ ೯೮೪೫೪೧೪೬೨೨ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವುದೆ0ದು ಸಂಘಟನೆಯ ಕಾರ್ಯದರ್ಶಿ ವಿನಿತಾ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.