Header Ads Widget

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಒತ್ತಡಗಾಯ ನಿರ್ವಹಣೆ - ಕೆ ವಿಜಯ ಕೊಡವೂರು

 

ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ, ನವೋದಯ ಫ್ರೆಂಡ್ಸ್ ದುರ್ಗಾನಗರ, ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಸೇವಾಭಾರತಿ ಕನ್ಯಾಡಿ ಆಶ್ರಯದಲ್ಲಿ ನಡೆದ ಕಾಪು ಮತ್ತು ಉಡುಪಿ ತಾಲೂಕಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಒತ್ತಡ ಗಾಯ ನಿರ್ವಹಣೆ ಮತ್ತು ಉಚಿತ ಔಷಧ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾದ ಕೆ ವಿಜಯ ಕೊಡವೂರು ದಿವ್ಯಾಂಗರ ಸೇವೆ ದೇವರ ಸೇವೆ ಕಷ್ಟದಲ್ಲಿರುವಂತಹ ಎಲ್ಲ ದಿವ್ಯಾಂಗರನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಧೈರ್ಯ ತುಂಬಿದರು. ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ದಿವ್ಯಾಂಗರ ಮನೆ ಮನೆ ಭೇಟಿ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸಿ ಕಾರ್ಯಕ್ರಮ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯುವ ಜನ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ನಗರಸಭಾ ಸದಸ್ಯರು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕರಾದ ಕೆ ವಿಜಯ ಕೊಡವೂರು, ದಿವ್ಯಾಂಗ ರಕ್ಷಣಾ ಸಮಿತಿಯ ಮ್ಯಾನೇಜರ್ ಅಖಿಲೇಶ್ ಎ.ನವೋದಯ ಸಂಘದುರ್ಗಾ ನಗರ ಏಣಗುಡ್ಡೆ ಕಟಪಾಡಿ ಅಧ್ಯಕ್ಷ ದೀಪಕ್, ಸೇವಾಭಾರತಿ ಕನ್ಯಾಡಿಯ ಫಿಜಿಯೋಥೆರಫಿಸ್ಟ್ ಗಣೇಶ್ ಕಾರ್ತಿಕ್ ಮತ್ತು ಕ್ಷೇತ್ರ ಸಂಯೋಜಕರಾದ ಮನೋಜ್ ಉಪಸ್ಥಿತರಿದ್ದರು.