ಉಡುಪಿ ನಗರಸಭೆಯ ವ್ಯಾಪ್ತಿಯಲ್ಲಿ ಮಳೆ ನೀರು ಹರಿಯುವ ಚರಂಡಿಗಳಿಗೆ ವಸತಿ ಸಮುಚ್ಚಯ, ಹೋಟೆಲ್, ಇತ್ಯಾದಿ ವಾಣಿಜ್ಯ ಸಂಕೀರ್ಣಗಳ ಕೊಳಚೆ ನೀರನ್ನು ಅನಧಿಕೃತವಾಗಿ ಬಿಡುತ್ತಿರುವುದು ಕಂಡು ಬಂದಿದ್ದು, ಇದರಿಂದ ಕಲುಷಿತ ನೀರು ಕುಡಿಯುವ ನೀರಿನ ಮೂಲಗಳು ಸೇರಿ ನೆರೆಹೊರೆಯ ಬಾವಿಗಳ ನೀರು ಹಾಳಾಗುತ್ತಿದೆ ಹಾಗೂ ನೈರ್ಮಲ್ಯಕ್ಕೂ ತೊಂದರೆಯುoಟಾಗುತ್ತಿದೆ.
ನಗರಸಭಾ ವ್ಯಾಪ್ತಿಯಲ್ಲಿ ಇರುವ ವಸತಿ ಸಮುಚ್ಚಯ, ಹೋಟೆಲ್, ಇತ್ಯಾದಿ ವಾಣಿಜ್ಯ ಸಂಕೀರ್ಣಗಳ ಮಾಲೀಕರು ತಮ್ಮ ಕಟ್ಟಡದ ಕಲುಶಿತ ನೀರನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಕಟ್ಟಡ ಮಾಲೀಕರು ತಮ್ಮ ಕಟ್ಟಡದ ಕೊಳಚೆ ನೀರನ್ನು, ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದು ಕಂಡು ಬಂದರೆ ಸದರಿ ಕಲುಷಿತ ನೀರಿನ ಮೂಲವನ್ನು ತಡೆದು ಅಂತಹ ಕಟ್ಟಡ ಮಾಲೀಕರ ವಿರುದ್ಧ ಜಲ ಮಾಲಿನ್ಯ ತಡೆ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ರೂ. 5000 ದಂಡ ವಿಧಿಸಿ ಸದರಿ ಕಟ್ಟಡಗಳ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.