Header Ads Widget

ಜ.11 : ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶ್ರೀ ಪಂಚದುರ್ಗ ನಮಸ್ಕಾರ ಪೂಜೆ

ಉಡುಪಿ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಇದೇ ತಿಂಗಳ ತಾರೀಕು ಹನ್ನೊಂದರ ಶನಿವಾರದಂದು ಶ್ರೀ ಪಂಚದುರ್ಗ ನಮಸ್ಕಾರ ಪೂಜೆ ಸಂಪನ್ನಗೊಳ್ಳಲಿದೆ.

ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಸಂಜೆ ಗಂಟೆ 5 ರಿಂದ ಪೂಜೆ ಆರಂಭಗೊಳ್ಳಲಿದೆ.

ಏಕಕಾಲದಲ್ಲಿ ಪಂಚವರ್ಣಾತ್ಮಕವಾಗಿ ರಚಿಸಲಾಗುವ 5 ಮಂಡಲಗಳಲ್ಲಿ ಮೂಲದುರ್ಗ ಜಲದುರ್ಗ ಅಗ್ನಿದುರ್ಗ ವನದುರ್ಗ ಹಾಗೂ ಅಗ್ರ ದುರ್ಗೆ ಎಂದು ಪಂಚ ದೀಪದಲ್ಲಿ ಪಂಚ ದುರ್ಗೆಯರನ್ನು ಪಂಚ ರೂಪದಿಂದ ಪೂಜಿಸಲಾಗುತ್ತದೆ.

ಶ್ರೀ ದುರ್ಗಾ ಸಪ್ತಶತಿಯ ಸಾರವೆನಿಸಿದ ಸಪ್ತಶ್ಲೋಕಿ ಮಂತ್ರದಿಂದ ವಿಶೇಷವಾಗಿ ಅರ್ಚಿಸಿ ವಿವಿದ ಸ್ತುತಿಗಳಿಂದ ಪುಷ್ಪಾರ್ಚನೆಗೈದು ಪಂಚ ದುರ್ಗೆಯರ ವಿಶೇಷ ಅನುಗ್ರಹವನ್ನು ಯಾಚಿಸಲಾಗುತ್ತದೆ.

ದೈತ್ಯ ನಾಶಕವು ವಿಘ್ನ ನಾಶಕವು ರೋಗನಾಶಕವು ಪಾಪ ಪರಿಹಾರ ಹಾಗೂ ಭಯವನ್ನು ನಾಶಗೊಳಿಸುವ  ಈ ಬಹು ಫಲಪ್ರದವಾದ ಮಹಾನ್ ಪೂಜೆಯಲ್ಲಿ ಅಷ್ಟಾವಧಾನ ಸೇವೆ, ನೃತ್ಯ ಸೇವೆ, ನಾದ ಸೇವೆ ಸಂಪನ್ನಗೊಳ್ಳಲಿದ್ದು, ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾದನೆ ಬ್ರಾಹ್ಮಣರಾಧನೆ ಹಾಗೂ ರಾತ್ರಿ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.