Header Ads Widget

ಈ ವರ್ಷ 2025 ರಲ್ಲಿ ಖಗೋಳದಲ್ಲಿ ಕೆಲ ವಿಶೇಷಗಳು


ಅತೀ ಹೆಚ್ಚು ಸೌರ ಜ್ವಾಲೆಗಳು, ನಾಲ್ಕು ಗ್ರಹಣಗಳು, ಮೂರು ಸೂಪರ್ ಮೂನ್ಗಳು, ಶನಿಗ್ರಹದ ಬಳೆ ಮಾಯ.

1. ಸೂರ್ಯನ ಜ್ವಾಲೆಗಳ ನರ್ತನ : ಹನ್ನೊಂದು ವರ್ಷದಲ್ಲೊಮ್ಮೆ ನಡೆಯುವ ಅತೀ ಹೆಚ್ಚು ಸೌರಜ್ವಾಲೆಗಳು ಸೂರ್ಯ ಹೊರ ಹಾಕುವಿಕೆ ಕಳೆದ ವರ್ಷ ಪ್ರಾರಂಭ ವಾದುದು ಈ ವರ್ಷದ ಪ್ರಾರಂಭದ ಕೆಲ ತಿಂಗಳಲ್ಲಿ ಅತಿಯಾಗಲಿದೆ. ಕುದಿಯುವ ಸೂರ್ಯ ದಶದಿಶೆಗೆ ವಿಶೇಷ ಶಕ್ತಿ ಕಣಗಳೊಂದಿಗೆ ಬೆಳಕನ್ನು ಚಿಮ್ಮಿ, ಅತೀ ಹೆಚ್ಚು ಸೌರಕಲೆಗಳುಂಟಾಗಲಿವೆ. 

2. ⁠ಗ್ರಹಣಗಳು: ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುವುವಾದರೂ ಭಾರತಕ್ಕೆ ಒಂದೇ. ಮಾರ್ಚ್ 13/14 ಚಂದ್ರ ಗ್ರಹಣ, ಮಾರ್ಚೆ 29 ಪಾರ್ಶ್ವ ಸೂರ್ಯ ಗ್ರಹಣ, ಸೆಪ್ಟಂಬರ್ 7/8 ಚಂದ್ರ ಗ್ರಹಣ ಹಾಗೂ ಸೆಪ್ಟಂಬರ್ 21 ಪಾರ್ಶ್ವ ಸೂರ್ಯ ಗ್ರಹಣ . ಇವುಗಳಲ್ಲಿ ಭಾರತಕ್ಕೆ ಸಪ್ಟಂಬರ್ 7 ರ ಚಂದ್ರಗ್ರಹಣ ಒಂದೇ ಗೋಚರ.

3. ⁠ಸೂಪರ್ಮೂನ್ಗಳು: ಈ ವರ್ಷ ಮೂರು ಸೂಪರ್ಮೂನ್ಗಳು. ಅಕ್ಟೋಬರ್ 7 ನವಂಬರ್5, ಡಿಸೆಂಬರ್ 4 ಸೂಪರ್ ಮೂನ್ಗಳಾದರೆ ಮಾರ್ಚ್ 14, ಎಪ್ರಿಲ್ 13ಹಾಗೂ ಮೇ 12 ಗಳಲ್ಲಿ ಮೈಕ್ರೋ ಮೂನ್ ಸಂಭವಿಸಲಿದೆ. 

4. ⁠ಶನಿಗ್ರಹದ ಬಳೆ ಮಾಯ : 29ವರ್ಷಕ್ಕೆ ಎರಡು ಬಾರಿ ಭೂಮಿಯವರಿಗೆ ಶನಿಗ್ರಹದ ಸುಂದರ ಬಳೆಗಳು ಕಾಣುವುದೇ ಇಲ್ಲ.ಈ ವರ್ಷದ ಮಾರ್ಚ್ ನಿಂದ ನವಂಬರ್ವರೆಗೆ ದೂರದರ್ಶಕದಲ್ಲಿ ಶನಿಯ ಬಳೆಗಳೇ ಕಾಣುವುದಿಲ್ಲ. ಶನಿಗ್ರಹದ ಬಳೆಗಳ ಸಮತಲ ಹಾಗೂ ಭೂಮಿಯ ಸಮತಲ ಒಂದೇ ಆಗುವುದೇ ಇದಕ್ಕೆ ಕಾರಣ.

ಈ ವರ್ಷ ಜನವರಿಯಲ್ಲಿ ಮಂಗಳ, ಸಪ್ಟಂಬರ್ ನಲ್ಲಿ ಶನಿ ಡಿಸೆಂಬರ್ನಲ್ಲಿ ಗುರುಗ್ರಹ ಭವ್ಯವಾಗಿ ಕಾಣಲಿವೆ.  

ವಿಶೀಷವೆಂದರೆ ಸಂಜೆಯ ಆಕಾಶದಲ್ಲಿ ಜನವರಿ ಅಂತ್ಯದಲ್ಲಿ ಕಣ್ಣಿಗೆ ಕಾಣುವ ನಾಲ್ಲು ಗ್ರಹಗಳು ಹಾಗೆಯೇ ಪೆಬ್ರವರಿ ಅಂತ್ಯದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬುದ, ಶುಕ್ರ, ಶನಿ ಗುರು ಹಾಗೂ ಮಂಗಳ ಈ ಐದು ಗ್ರಹಗಳೂ ಸುಂದರವಾಗಿ ಕಾಣಲಿವೆ. 

~ಡಾ. ಎ ಪಿ ಭಟ್, ಉಡುಪಿ.