ರಾಸ್ ಅಲ್ ಖೈಮಾ ಕರ್ನಾಟಕ ಸಂಘ, ರಾಕ್, ಯು.ಎ.ಇ. ಯು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, 56 ದಾನಿಗಳು ಭಾಗವಹಿಸಿದ್ದು, ಸೂಕ್ತ 42 ದಾನಿಗಳಿಂದ ರಕ್ತನಿಧಿಗಳನ್ನು ಸಂಗ್ರಹಿಸ ಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂತೋಷ್ ಹೆಗ್ಡೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಸಾಧನೆಯು ಉದಾರತೆ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಅಗತ್ಯವಿರುವವರಿಗೆ ಕೊಡುಗೆ ನೀಡಲು ಮತ್ತು ಬೆಂಬಲಿಸಲು ಮುಂದಾದ ಎಲ್ಲಾ ರಕ್ತ ದಾನಿಗಳಿಗೆ ರಾಸ್ ಅಲ್ ಖೈಮಾ ಕರ್ನಾಟಕ ಸಂಘ, ರಾಕ್, ಯು.ಎ.ಇ. ಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
ಭವಿಷ್ಯದಲ್ಲಿ ಇಂತಹ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸುವ ನಮ್ಮ ಧ್ಯೇಯವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ ಹಾಗೂ ಎಲ್ಲರ ಬೆಂಬಲಕ್ಕಾಗಿ ಧನ್ಯವಾದಗಳು.