Header Ads Widget

ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಹಿಂದುವಲ್ಲವೇ? ~ಜಯರಾಂ ಅಂಬೆಕಲ್ಲು

ರಾಷ್ಟ್ರಿಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಜವಾಗಿಯೂ ಹಿಂದುವೇ ಎಂಭ ಅನುಮಾನ ಮೂಡುತ್ತಿದೆ. 144 ವರ್ಷಕೊಮ್ಮೆ ನಡೆಯುವ, ಹಿಂದುಗಳ ಪುಣ್ಯ ತೀರ್ಥ ಮಹಾ ಕುಂಭಮೇಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪುಣ್ಯಸ್ನಾನ ಮಾಡಿದನ್ನು ಅವಹೇಳನ ಮಾಡಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಬಡತನ ನಿರ್ಮೂಲನೆ ಆಗುತ್ತದೆಯಾ ಎಂದು ಪ್ರಶ್ನೆ ಮಾಡಿದರು.

ಖರ್ಗೆಯವರು ಒಬ್ಬ ಹಿಂದುವಾಗಿ, ಮುಸ್ಲಿಂ ಹಾಗೂ ಸೋನಿಯಾ ಗಾಂಧಿ ಯನ್ನು ಮೆಚ್ಚಿಸಲಿಕ್ಕೆ 144 ವರ್ಷಕೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡುವ ಅಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುವುದು, ಖರ್ಗೆಯವರ ದ್ವಿಮುಖ ದೋರಣೆಯನ್ನು ತೋರಿಸುತ್ತಿದೆ.

ಹಜ್ ಯಾತ್ರೆಗೆ ನಮ್ಮ ತೆರಿಗೆ ಹಣದಲ್ಲಿ ಸಿಂಹಪಾಲು ಕೊಡುವುದರ ಬಗ್ಗೆ ಖರ್ಗೆ ಯವರು ಮೌನ ವಹಿಸುವುದು ಯಾಕೆ? ಹಿಂದುಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತ ಕೆಲಸಗಳನ್ನು ಮಾಡುತ್ತಿರುವುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರು ಹಾಕಿ ಕೊಟ್ಟ ಸಂವಿಧಾನ (ಧಾರ್ಮಿಕ ಆಚರಣೆಯ ಬಗ್ಗೆ) ವನ್ನು ಪ್ರಶ್ನೆ ಮಾಡಿದ ಖರ್ಗೆ ನಿಜವಾಗಿಯೂ ಹಿಂದುವೇ? ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಕಾರ್ಯಾಧ್ಯಕ್ಷ ಜಯರಾಂ ಅಂಬೆಕಲ್ಲುರವರು ಪ್ರತಿಕ್ರಿಯಿಸಿದ್ದಾರೆ.