ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ- ಸಾಲಿಗ್ರಾಮ ಬ್ರಾಂಚಿನ 53 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕಿನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ. ಎಸ್ ಕಾರಂತರು ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿ, ಇನಷ್ಟು ಪ್ರಗತಿ ಸಾಧಿಸಲು ನಾವೆಲ್ಲಾ ಪ್ರಯತ್ನಿಸುವಾ ಅಂತ ತಿಳಿಸಿದರು.ಸಮಾರಂಭದ ಅಧ್ಯಕ್ಷತೆ ವಾದಿರಾಜ್ ಕೆ. (AGM) ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿಷ್ಣುಮೂರ್ತಿ ಉಪಾಧ್ಯರು ಉಪಸ್ಥಿತರಿದ್ದರು.ಶ್ರೀ ಚಂದ್ರಶೇಖರ ಕಾರಂತರು,ಶ್ರೀ ಚಂದ್ರಶೇಖರ ಸೋಮಯಾಜಿ,ನಿವೃತ್ತ DGM ಶ್ರೀಆನಂದರಾಮ ಅಡಿಗ, ಬೈಕಾಡಿ ಸೂರ್ಯನಾರಾಯಣ ರಾವ್,ಇವರುಗಳು ಬ್ಯಾಂಕಿನಬೆಳವಣಿಗೆ, ಇತ್ಯಾದಿವಿಷಯ ಮಾತಾಡಿದರು. ಇದೇ ಸಮಾರಂಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಶ್ರೀಕೆ. ತಾರಾನಾಥ ಹೊಳ್ಳ
ಕರ್ಣಾಟಕ ಸರಕಾರದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕತರು, ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.ಬ್ಯಾಂಕಿನ ವ್ಯವಸ್ಥಾಪಕರಾದ ಶ್ರೀ ಅವಿನಾಶ್ ಸ್ವಾಗತಿಸಿದರು. ಶ್ರೀಮತಿ ರಶ್ಮಿಯವರುವಂದಿಸಿದರು. ಶ್ರೀ ವಿನಯಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಾರ್ವಜನಿಕರು , ಬ್ಯಾಂಕಿನ ಸಿಬ್ಬಂದಿಯವರು, ಗ್ರಾಹಕರುಎಲ್ಲರೂ ಉಪಸ್ಥಿತರಿದ್ದರು.