ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ನುಡಿ ಘಟಕ ಮಣಿಪಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗ ಸಹಯೋಗದೊಂದಿಗೆ ಜನವರಿ 18, 2025 ರಂದು ಸಂಚಾರ ಜಾಗೃತಿ ಸಪ್ತಾಹವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮನೋಹರ್ ಹೆಚ್ ಕೆ ಉದ್ಘಾಟಿಸಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತ್ತು ಸಮುದಾಯಕ್ಕೆ ಟ್ರಾಫಿಕ್ ಸಿಗ್ನಲ್ ಜಾಗೃತಿ, ಮದ್ಯಪಾನ ಮತ್ತು ಚಾಲನೆಯ ಅಪಾಯಗಳು, ಜವಾಬ್ದಾರಿಯುತ ಪಾರ್ಕಿಂಗ್ ಅಭ್ಯಾಸಗಳು, ಸಂಚಾರ ಅಡಚಣೆಗಳನ್ನು ಕಡಿಮೆ ಗೊಳಿಸುವುದು, ಟ್ರಾಫಿಕ್ ಸಿಗ್ನಲ್ ಜಾಗೃತಿ ಶಿಕ್ಷಣ ನೀಡುವ ಉದ್ದೇಶವಾಗಿತ್ತು.
ಪೋಸ್ಟರ್ ಪ್ರದರ್ಶನಗಳು, ಜಾಗೃತಿ ಘೋಷಣೆಗಳು ಮತ್ತು ಪಠಣಗಳು, ಎಂಐಟಿ ಕ್ಯಾಂಪಸ್ ನಾದ್ಯಂತ ಸರಳ ಸಂಚಾರ ನಿಯಮಗಳು ಮತ್ತು ನಿಬಂಧನೆಗಳ ಪ್ರಕಟಣೆ, ಸಾರ್ವಜನಿಕ ಮತ್ತು ಆಟೋ ಚಾಲಕರ ಪರಸ್ಪರ ಕ್ರಿಯೆ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿತು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾಹೆಯ ಎಂಐಟಿ, ಎನ್‌ಎಸ್‌ಎಸ್ ಘಟಕಗಳು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ನುಡಿ ಘಟಕ ಮಣಿಪಾಲ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಬೆಂಬಲ ಮತ್ತು ಭಾಗವಹಿಸಿದ್ದರು.
ಎನ್‌ಎಸ್‌ಎಸ್ ತಂಡದ ನಾಯಕರಾದ ವಿಜಯಾಂಶ್ ಚೌರಾಸಿಯಾ ಧನ್ಯವಾದವಿತ್ತರು. ಘಟಕದ ಮುಖ್ಯಸ್ಥರಾದ ಅಕ್ಷತ ಕುರಾನಾ, ಸಂಜನಾ ಮತ್ತು ಕಣವ್ ಸಚ್ದೇವ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ನಾಯಕತ್ವದ ಮೂಲಕ ಎಲ್ಲಾ ಗುಂಪಿನ ಸದಸ್ಯರೊಂದಿಗೆ ಸಾಧ್ಯವಾಯಿತು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಮದ್ದೋಡಿ, ಡಾ.ಲಕ್ಷ್ಮಣರಾವ್, ಡಾ.ಪೂರ್ಣಿಮಾ ಭಾಗವತ, ಡಾ.ಹರ್ಷಿಣಿ ದಾಸರಿ, ಡಾ.ಮಹಾಶ್ವೇತಾ ಮೇಗಾರ್ ಭಾಗವಹಿಸಿದ್ದರು.