ಮಂದಾರ್ತಿ ಸೇವಾ ಸಹಕಾರಿ ಸಂಘದ 2025-30ರ ಸಾಲಿಗೆ ಸೋಮವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷರಾಗಿ ಎಚ್. ಗಂಗಾಧರ ಶೆಟ್ಟಿ ಮಂದಾರ್ತಿ ಅವರು ಸತತ ಏಳನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಚ್. ಗಂಗಾಧರ ಶೆಟ್ಟಿ ಅವರು ಕಳೆದ ೩೦ವರ್ಷಗಳಿಂದ ಸತತವಾಗಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ವಿರೋಧವಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ. ಉಪಾಧ್ಯಕ್ಷರಾಗಿ ಸುರೇಶ್ ಶೆಟ್ಟಿ ಕಾಡೂರು, ನಿರ್ದೇಶಕರುಗಳಾಗಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಗಣೇಶ್ ಶೆಟ್ಟಿ ಮಂದಾರ್ತಿ, ಜಲಂಧರ ಶೆಟ್ಟಿ ನಡೂರು, ದಿನೇಶ್ ಮರಕಾಲ ಮಂದಾರ್ತಿ, ಚಂದ್ರಶೇಖರ ಪೂಜಾರಿ ಶಿರೂರು, ಕೆ.ಶಂಭುಶಂಕರ ರಾವ್ ಹೆಗ್ಗುಂಜೆ, ಗುಲಾಬಿ ಬಾಯಿ ಹೆಗ್ಗುಂಜೆ, ಪ್ರೇಮಾ ಮರಕಾಲ್ತಿ ಹೆಗ್ಗುಂಜೆ, ಬಸವ ನಾಯ್ಕ ಕಾಡೂರು ಮತ್ತು ರಾಧ ಹೆಗ್ಗುಂಜೆ ಆಯ್ಕೆಯಾದರು. ಜನವರಿ೧೧ ರಂದು ನಡೆದ ಚುನಾವಣೆಯಲ್ಲಿ ಎಚ್.ಗಂಗಾಧರ ಶೆಟ್ಟಿ ನೇತೃತ್ವದಲ್ಲಿ ಎಲ್ಲಾ ಸ್ಥಾನವನ್ನು ಜಯಗಳಿಸಿತ್ತು.
ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಕೆ.ಆರ್.ರೋಹಿತ್ ಚುನಾವಣಾ ಅಕಾರಿಯಾಗಿ ಚುನಾವಣೆಯ ಪ್ರಕ್ರಿಯೆಯನ್ನು ನಡೆಸಿದರು.