Header Ads Widget

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಮ್.ಎ. ಮೌಲಾ ಆಯ್ಕೆ

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮೌಲಾ ಉಡುಪಿ ಆಯ್ಕೆಯಾಗಿದ್ದಾರೆ. ಇಂದು ಉಡುಪಿಯ ಯು.ಬಿ.ಎಂ.ಸಿ. ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಮಹಾಸಭೆಯಲ್ಲಿ ಅವರನ್ನು ಮುಂದಿನ 2 ವರ್ಷಗಳ ಅವಧಿಗೆ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಎಂ.ಎ. ಮೌಲಾ ಅವರು ಉಡುಪಿಯ ಖ್ಯಾತ ಉದ್ಯಮಿಯಾಗಿದ್ದು ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ 2 ಬಾರಿ ಅವರು ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಒಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾಗಿ ಕೇಂದ್ರೀಯ ಮಟ್ಟದಲ್ಲಿ ಯಾಸೀನ್ ಮಲ್ಪೆ, ಇದ್ರೀಸ್ ಹೂಡೆ, ಇಕ್ಬಾಲ್ ಕಟಪಾಡಿ, ರಫೀಕ್ ಗಂಗೊಳ್ಳಿ ಮತ್ತು ಮೌಲಾನಾ ಝಮೀರ್ ಅಹ್ಮದ್ ರಶಾದಿ ಕಂಡ್ಲೂರು ಆಯ್ಕೆಯಾದರು. ವಿವಿಧ ಸಂಘಟನೆಗಳ ಪ್ರತಿನಿಧಿಗಳಾಗಿ ತೌಫೀಕ್ ಅಬ್ದುಲ್ಲಾ ನಾವುಂದ, ಡಾ. ಅಬ್ದುಲ್ ಅಝೀಝ್ ಮಣಿಪಾಲ್, ಅಬ್ದುರ್ರಹ್ಮಾನ್ ಕನ್ನಂಗಾರ್ ಮತ್ತು ಖಾಲಿದ್ ಮಣಿಪುರ ನೇಮಿಸಲ್ಪಟ್ಟರು. 

ಉಡುಪಿ ತಾಲೂಕಿನಿಂದ ಜಿಲ್ಲಾ ಸಮಿತಿ ಸದಸ್ಯರಾಗಿ ಅಬ್ದುಲ್ ಅಝೀಝ್ ಉದ್ಯಾವರ, ಯಾಸೀನ್ ಕೋಡಿ ಬೆಂಗ್ರೆ, ಸೈಯದ್ ಫರೀದ್, ಇಕ್ಬಾಲ್ ಮನ್ನಾ, ಶಬ್ಬೀರ್ ಮಲ್ಪೆ, ಇರ್ಷಾದ್ ನೇಜಾರ್, ವಿ. ಎಸ್. ಉಮರ್ ಮತ್ತು ಆದಿಲ್ ಹೂಡೆ ಆಯ್ಕೆಯಾದರು.

 ಕುಂದಾಪುರ ತಾಲೂಕಿನಿಂದ ರಿಯಾಝ್ ಕೋಡಿ, ದಸ್ತಗೀರ್ ಕಂಡ್ಲೂರು, ಶಾಬಾನ್ ಹಂಗ್ಳೂರ್, ಮುಷ್ತಾಕ್ ಹೆನ್ನಾಬೈಲು ಮತ್ತು ಹನೀಫ್ ಗುಲ್ವಾಡಿ, ಕಾಪು ತಾಲೂಕಿನಿಂದ ಶಭಿ ಅಹ್ಮದ್ ಖಾಝಿ, ನಸೀರ್ ಅಹ್ಮದ್ ಶರ್ಫುದ್ದೀನ್, ಅನ್ವರ್ ಅಲಿ, ಮುಹಮ್ಮದ್ ಆಝಮ್ ಶೇಖ್ ಮತ್ತು ಮುಹಮ್ಮದ್ ಇಕ್ಬಾಲ್, ಕಾರ್ಕಳ ತಾಲೂಕಿನಿಂದ ಮುಹಮ್ಮದ್ ಗೌಸ್, ಅಶ್ಫಾಕ್ ಅಹ್ಮದ್, ನಾಸಿರ್ ಶೇಖ್, ಮುಹಮ್ಮದ್ ಶರೀಫ್ ಬಂಗ್ಲೆಗುಡ್ಡೆ ಮತ್ತು ಮುಹಮ್ಮದ್ ಶರೀಫ್ ರೆಂಜಾಳ, ಬ್ರಹ್ಮಾವರದಿಂದ ತಾಜುದ್ದೀನ್ ಇಬ್ರಾಹಿಮ್, ಇಬ್ರಾಹಿಮ್ ಕೋಟ, ಆಸಿಫ್ ಬೈಕಾಡಿ, ಅಸ್ಲಮ್ ಹೈಕಾಡಿ ಮತ್ತು ಹಾರೂನ್ ರಶೀದ್ ಸಾಸ್ತಾನ ಹಾಗೂ ಬೈಂದೂರು ತಾಲೂಕಿನಿಂದ ಶಮ್ಸ್ ತಬ್ರೇಝ್, ಶೇಖ್ ಫಯಾಝ್ ಅಲಿ, ಅಮೀನ್ ಗೋಳಿಹೊಳೆ, ಅಫ್ತಾಬ್ ಕಿರಿ ಮಂಜೇಶ್ವರ ಮತ್ತು ತುಫೈಲ್ ಶಹಾಬುದ್ದೀನ್ ಆಯ್ಕೆಯಾದರು.

ತದನಂತರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಮುಸ್ತಫಾ ಸ ಅದಿ ಮೂಳೂರು , ಟಿ. ಎಮ್. ಜಫ್ರುಲ್ಲಾ ಹೂಡೆ, ಖತೀಬ್ ರಶೀದ್ ಮಲ್ಪೆ, ಬುವಾಜಿ ಮುಹ್ಸಿನ್ ಬೈಂದೂರು, ಶೇಖ್ ಅಬ್ದುಲ್ಲತೀಫ್ ಮದನಿ, 

ರೈಹಾನ್ ತ್ರಾಸಿ, ಅಬೂ ಮುಹಮ್ಮದ್ ಮುಜಾವರ್ ಕುಂದಾಪುರ, ಪೀರು ಸಾಹೇಬ್ ಆದಿ ಉಡುಪಿ ಮತ್ತು ಬಿ. ಮುಹ್ಯುದ್ದೀನ್ ಕಟ್ಪಾಡಿ ಅವರನ್ನು ಜಿಲ್ಲಾ ಸಮಿತಿ ಸದಸ್ಯರಾಗಿ ಸಹಕರಣ ಮಾಡಿಕೊಳ್ಳಲಾಯಿತು. 

 ಭಟ್ಕಳದ ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಇದರ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಬ್ದುರ್ರಕೀಬ್ ನದ್ವಿ, ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಒಕ್ಕೂಟದ ಉಪಾಧ್ಯಕ್ಷರಾದ ಮೌಲಾನಾ ಝಮೀರ್ ಅಹ್ಮದ್ ರಶಾದಿ ಅವರ ಕುರ್ಆನ್ ಪಠನದೊಂದಿಗೆ ಮಹಾಸಭೆಯು ಆರಂಭಗೊಂಡಿತು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇದ್ರೀಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ದ್ವೈವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸಯ್ಯದ್ ಫರೀದ್ ದ್ವೈವಾರ್ಷಿಕ ಲೆಕ್ಕಪತ್ರಗಳನ್ನು ಮಹಾಸಭೆಯ ಮುಂದಿಟ್ಟರು. ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಮಲ್ಪೆ ಅಧ್ಯಕ್ಷೀಯ ಮಾತುಗಳನ್ನಾಡಿದರು.