ಹಿರಿಯ ವೃದ್ದರೊಬ್ಬರು ಅಸಹಾಯಕತೆಯಿಂದ ಕಣ್ಣಿರಿಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿಯವರು ವೃದ್ಧರನ್ನು ರಕ್ಷಿಸಿ ತುರ್ತು ಆಶ್ರಯಕ್ಕಾಗಿ ಮೂಡುಬೆಟ್ಟಿನ ಶ್ರೀ ಕೃಷ್ಣ ವೃದ್ದರ ಆಶ್ರಯಧಾಮಕ್ಕೆ ದಾಖಲಿಸಿದ್ದಾರೆ.
ವೃದ್ದರು ಹಿರಿಯಡ್ಕ ಮೂಲದ ನಾಗರಾಜ್ ಭಟ್ (78 ವರ್ಷ) ಕೌಟುಂಬಿಕ ಕಲಹದಿಂದ ನೊಂದು ಬಂದಿದ್ದೇನೆ ಎಂಬ ಮಾಹಿತಿ ನೀಡಿದ್ದಾರೆ. ವೃದ್ದರ ಅಸಹಾಯಕತೆಯ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿಯವರು ಶ್ರೀಕೃಷ್ಣ ವೃದ್ದರ ಆಶ್ರಮದ ಮುಖ್ಯಸ್ಥರಾದ ಕೊರಂಗ್ರಪಾಡಿಯ ಕೃಷ್ಣಮೂರ್ತಿ ಆಚಾರ್ಯರಲ್ಲಿ ವಿನಂತಿಸಿದ್ದಾಗ ಸ್ಪಂಧಿಸಿ ತುರ್ತು ಆಶ್ರಯ ನೀಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಗಿದೆ.
ಸಂಬಂಧಿಕರು ಹಿರಿಯಡ್ಕ ಪೋಲಿಸ್ ಠಾಣೆ ಅಥವಾ ಶ್ರೀಕೃಷ್ಣ ವೃದ್ದರ ಆಶ್ರಮವನ್ನು ಸಂಪರ್ಕಿಸಬೇಕೆಂದು ವಿಶುಶೆಟ್ಟಿಯವರು ವಿನಂತಿಸಿದ್ದಾರೆ.